ಅವ್ಯವಹಾರ ನಡೆದಿದ್ದರೆ ವಿಧಾನಸೌದಕ್ಕೆ ಬಂದು ದಾಖಲೆ ಪರಿಶೀಲಿಸಿ: ಸಿದ್ದರಾಮಯ್ಯಗೆ ಸಚಿವ ಸೋಮಶೇಖರ್ ತಿರುಗೇಟು

Update: 2020-07-11 18:29 GMT

ಮೈಸೂರು,ಜು.11: ಕೊರೋನಾ ಕಿಟ್ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರೆಸಾರ್ಟ್ ನಲ್ಲಿ ಕುಳಿತು ಹೇಳುವುದಲ್ಲ, ವಿಧಾನಸೌದಕ್ಕೆ ಬಂದು ದಾಖಲೆ ಪರಶೀಲಿಸಲಿ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್  ತಿರುಗೇಟು ನೀಡಿದರು.

ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೋನ ವಿಚಾರದಲ್ಲಿ ಅವ್ಯವಹಾರ ಆಗಿದೆ ಎಂದು ರೆಸಾರ್ಟ್ ನಲ್ಲಿ ಕುಳಿತು ಆರೋಪ ಮಾಡುವುದಲ್ಲ. ನೀವು ವಿಧಾನಸೌದಕ್ಕೆ ಬನ್ನಿ ನಿಮಗೆ ಬೇಕಾದ ದಾಖಲೆ ಕೊಡುತ್ತೇವೆ. ಕೊರೋನ ವಿಚಾರದಲ್ಲಿ ಅವ್ಯವಹಾರ ಮಾಡುವವರು ಮನುಷ್ಯತ್ವ ಇಲ್ಲದವರು ಎಂದು ಕಿಡಿಕಾರಿದರು.

ಕೊರೋನಗೆ ನಾವು ವೆಚ್ಚ ಮಾಡಿರುವುದು 550 ಕೋಟಿ ರೂ. ಹೀಗಿರುವಾಗ 2 ಸಾವಿರ ಕೋಟಿ ಅವ್ಯವಹಾರ ಎಂದು ಹೇಳುತ್ತಿದ್ದಾರೆ. ಅದು ಹೇಗೆ ಸಾಧ್ಯ, ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರು ಎಂಬ ಕಾರಣಕ್ಕೆ ವಿರೋಧ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಬೆಂಗಳೂರಿನಲ್ಲಿ ವಲಯವಾರು ಉಸ್ತುವಾರಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಸಿದ ಅವರು, ಬೆಂಗಳೂರಿನಲ್ಲಿ ಅಧಿಕಾರಿಗಳ ಸಭೆ ನಡೆಸಿಲ್ಲ ಎಂಬ ಆರೋಪ ಸುಳ್ಳು. ನಿನ್ನೆ ನಾನು ಅಧಿಕಾರಿಗಳ ಸಭೆ ನಡೆಸಿದ್ದು, ಏನೆಲ್ಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಲ್ಲವೂ ಚರ್ಚೆಯಾಗಿದೆ. ನನ್ನ ವ್ಯಾಪ್ತಿಗೆ ಬರುವ ಕ್ಷೇತ್ರದ ಅಧಿಕಾರಿಗಳ ಸಭೆ ನಡೆಸಿದ್ದೇನೆ. ಕೆಲವಯ ಸಚಿವರು ನಿನ್ನೆಯೇ ಸಭೆ ನಡೆಸಿದ್ದು, ಮತ್ತೆ ಕೆಲವರು ಇಂದು ಸಭೆ ನಡೆಸಲಿದ್ದಾರೆ. ನಾವೆಲ್ಲರೂ ನಮಗೆ ವಹಿಸಿರುವ ಜವಾಬ್ದಾರಿ ನಿಭಾಯಿಸುತ್ತೇವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News