ರಾಡಾರ್ ನ ತಪ್ಪು ಹೊಂದಾಣಿಕೆ ಯುಕ್ರೇನ್ ವಿಮಾನ ಉರುಳಲು ಕಾರಣ: ಇರಾನ್

Update: 2020-07-12 15:42 GMT

ಟೆಹರಾನ್ (ಇರಾನ್), ಜು. 12: ವಾಯು ರಕ್ಷಣಾ ಘಟಕದ ರಾಡಾರ್ ವ್ಯವಸ್ಥೆಯ ಹೊಂದಾಣಿಕೆಯಲ್ಲಿ ಆಗಿದ್ದ ವ್ಯತ್ಯಯವು ಜನವರಿಯಲ್ಲಿ ಯುಕ್ರೇನ್ ಪ್ರಯಾಣಿಕ ವಿಮಾನವು ಪತನಗೊಳ್ಳಲು ಕಾರಣವಾಗಿತ್ತು ಎಂದು ಇರಾನ್ ಹೇಳಿದೆ.

 ಈ ಗಂಭೀರ ‘ಮಾನವ ತಪ್ಪಿ’ನಿಂದಾಗಿ ಜನವರಿ 8ರಂದು 176 ಮಂದಿಯನ್ನು ಹೊತ್ತೊಯುತ್ತಿದ್ದ ವಿಮಾನವು ಹೊಡೆದುರುಳಿಸಲ್ಪಟ್ಟಿತ್ತು ಎಂದು ಶನಿವಾರ ಸಲ್ಲಿಸಿದ ವರದಿಯಲ್ಲಿ ಇರಾನ್ನ ನಾಗರಿಕ ವಾಯುಯಾನ ಸಂಸ್ಥೆಯು ತಿಳಿಸಿದೆ.

ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯು ತಾರಕಕ್ಕೇರಿದ ಸಮಯದಲ್ಲಿ ಟೆಹರಾನ್ ವಿಮಾನ ನಿಲ್ದಾಣದಿಂದ ಯುಕ್ರೇನ್ ರಾಜಧಾನಿ ಕೀವ್ ಗೆ ಹಾರುತ್ತಿದ್ದ ವಿಮಾನವನ್ನು ಎರಡು ಕ್ಷಿಪಣಿಗಳು ಹೊಡೆದುರುಳಿಸಿದವು. ಅದರಲ್ಲಿದ್ದ ಎಲ್ಲ 176 ಮಂದಿ ಮೃತಪಟ್ಟಿದ್ದಾರೆ.

‘‘ರಾಡಾರ್ ವ್ಯವಸ್ಥೆಯನ್ನು ಹೊಂದಾಣಿಕೆ ಮಾಡಿಕೊಳ್ಳುವ ವಿಧಾನದಲ್ಲಿ ತಪ್ಪು ನಡೆದಿತ್ತು. ಅದು, ವ್ಯವಸ್ಥೆಯಲ್ಲಿ ‘107 ಡಿಗ್ರಿ ದೋಷ’ಕ್ಕೆ ಕಾರಣವಾಯಿತು’’ ಎಂದು ವರದಿ ಅಭಿಪ್ರಾಯಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News