ಎಸ್ಕೆಎಸ್ಸೆಸ್ಸೆಫ್, ಜಿಸಿಸಿ ಕೊಡಗು ಘಟಕದಿಂದ ಯುಎಇಯಿಂದ 2ನೇ ವಿಶೇಷ ವಿಮಾನ: ಬೆಂಗಳೂರು ತಲುಪಿದ 175 ಕನ್ನಡಿಗರು

Update: 2020-07-12 18:03 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.12: ವಿಶೇಷ ವಿಮಾನದ ಮೂಲಕ ಯುಎಇಯಿಂದ ರಾಜ್ಯದ 175 ಮಂದಿ ಕನ್ನಡಿಗರು ಸುರಕ್ಷಿತವಾಗಿ ಬೆಂಗಳೂರಿಗೆ ತಲುಪಿದ್ದಾರೆಂದು ಜಿಸಿಸಿ ಕೊಡಗು ಘಟಕದ ಅಧ್ಯಕ್ಷ ಹುಸೈನ್ ಫೈಝ್ ತಿಳಿಸಿದ್ದಾರೆ.

ಯುಎಇ ರಾಸಲ್ ಕೈಮ ವಿಮಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಎಸ್ಕೆಎಸ್ಸೆಸ್ಸೆಫ್ ಹಾಗೂ ಜಿಸಿಸಿ ಘಟಕ ಕೊಡಗು ವತಿಯಿಂದ ಮರಳಿ ಗೂಡಿಗೆ ಸಾಂತ್ವನ ಎಂಬ ವಿನೂತನ ಕಾರ್ಯಕ್ರಮದಡಿ ಗಲ್ಫ್ ರಾಷ್ಟ್ರಗಳಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಕನ್ನಡಿಗರನ್ನು ಮರಳಿ ತಾಯ್ನಾಡಿಗೆ ಕಳುಹಿಸುವ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಯುಎಇಯಿಂದ ಕಳೆದ ವಾರ 168 ಕನ್ನಡಿಗರು ಬೆಂಗಳೂರು ತಲುಪಿದ್ದರು. ಈಗ ಎರಡನೇ ವಿಮಾನದಲ್ಲಿ 175 ಮಂದಿ ಸುರಕ್ಷಿತವಾಗಿ ಬೆಂಗಳೂರಿಗೆ ತಲುಪಿದ್ದಾರೆ. ಗಲ್ಫ್ ರಾಷ್ಟ್ರಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರಿಗೆ ಬೇಕಾದ ಸೌಲಭ್ಯಗಳನ್ನು ಅಚ್ಚುಕಟ್ಟಾಗಿ ಮಾಡುತ್ತಾ ಬಂದಿದ್ದೇವೆ. ಬೆಂಗಳೂರು ತಲುಪಿರುವ ಪ್ರಯಾಣಿಕರು ಸರಕಾರದ ಎಲ್ಲ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಎಸ್‍ಕೆಎಸ್ಸೆಸ್ಸೆಫ್ ಅಬುಧಾಬಿ ಮುಖ್ಯಸ್ಥ ಶಾಫಿ ಪೆರುವಾಯಿ, ಮಾಧ್ಯಮ ವಿಭಾಗದ ಸದಸ್ಯ ಅಬ್ದುಲ್ ರಝಾಕ್, ಇರ್ಷಾದ್ ಕೂಡಿಗೆ, ರಫೀಕ್ ಕುಂಜಿಲ ಹಾಗೂ ಜಿಸಿಸಿ ಕೊಡಗು ಘಟಕದ ಸದಸ್ಯರು ಸೇರಿ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News