ಕೊಡಗು ಜಿಲ್ಲೆಯಲ್ಲಿಂದು 10 ಕೋವಿಡ್ ಪ್ರಕರಣಗಳು ದೃಢ

Update: 2020-07-13 04:59 GMT

ಮಡಿಕೇರಿ, ಜು.13: ಕೊಡಗು ಜಿಲ್ಲೆಯಲ್ಲಿ ಸೋಮವಾರ ಹೊಸದಾಗಿ 10 ಕೋವಿಡ್ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 179ಕ್ಕೆ ಏರಿಕೆಯಾಗಿದೆ. ಸೋಮವಾರಪೇಟೆ ತಾಲೂಕು ಒಂದರಲ್ಲೇ ಇಂದು 8 ಪ್ರಕರಣಗಳು ಪತ್ತೆಯಾಗಿವೆ.

ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಹೋಬಳಿಯ ನೀರುಗುಂದ ಗ್ರಾಮದ ಜ್ವರ ಲಕ್ಷಣಗಳಿದ್ದ 36 ವರ್ಷದ ಪುರುಷ, ಕಾರೆಕೊಪ್ಪದ ಜ್ವರ ಲಕ್ಷಣಗಳಿದ್ದ 41 ವರ್ಷದ ಮಹಿಳೆ, ಕಕ್ಕೆಹೊಳೆಯ ಜ್ವರ ಲಕ್ಷಣಗಳಿದ್ದ 25 ವರ್ಷದ ಮಹಿಳೆ, ಶನಿವಾರಸಂತೆ ಹೋಬಳಿ ಗೋಪಾಲಪುರದ ಜ್ವರ ಲಕ್ಷಣಗಳಿದ್ದ 25 ವರ್ಷದ ಪುರುಷ, ಚೆಟ್ಟಳ್ಳಿ ಚೇರಳ ಶ್ರೀಮಂಗಲದ ಜ್ವರ ಲಕ್ಷಣಗಳಿದ್ದ 62 ವರ್ಷದ ಪುರುಷ, ಸುಂಟಿಕೊಪ್ಪದ ಎಮ್ಮೆಗುಂಡಿ ರಸ್ತೆಯ ಜ್ವರ ಲಕ್ಷಣಗಳಿದ್ದ 59 ವರ್ಷದ ಪುರುಷ, ಕುಶಾಲನಗರದ ಬೈಚನಹಳ್ಳಿಯ ಜ್ವರ ಲಕ್ಷಣಗಳಿದ್ದ 25 ವರ್ಷದ ಪುರುಷ, ಕುಶಾಲನಗರದ ಕೋಣಮಾರಿಯಮ್ಮ ದೇವಸ್ಥಾನ ಬಳಿಯ ಜ್ವರ ಲಕ್ಷಣಗಳಿದ್ದ 56 ವರ್ಷದ ಮಹಿಳೆ, ಶನಿವಾರಸಂತೆ ಹೋಬಳಿ ಗೋಪಾಲಪುರ ನಿವಾಸಿ ಬೆಂಗಳೂರು ಪ್ರಯಾಣದ ಇತಿಹಾಸವಿರುವ 24 ವರ್ಷದ ಪುರುಷ ಹಾಗೂ ಮಡಿಕೇರಿ ನಗರದ ಗದ್ದುಗೆ ಬಳಿಯ ಜ್ವರ ಲಕ್ಷಣಗಳಿದ್ದ 28 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

68 ಮಂದಿ ಗುಣಮುಖರಾಗಿದ್ದು, ಮೂವರು ಮೃತಪಟ್ಟಿದ್ದಾರೆ. 108 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ವಿವರಿಸಿದ್ದಾರೆ. ಜಿಲ್ಲೆಯಲ್ಲಿ ಸೋಮವಾರ ಹೊಸದಾಗಿ 9 ನಿಯಂತ್ರಿತ ಪ್ರದೇಶಗಳನ್ನು ತೆರೆಯಲಾಗಿದೆ ಹಾಗೂ ಈ ಹಿಂದೆ ಘೋಷಿಸಿದ್ದ 3 ಪ್ರದೇಶಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ನೂತನ ನಿಯಂತ್ರಿತ ಪ್ರದೇಶಗಳು: ಕೊಡ್ಲಿಪೇಟೆ ಹೋಬಳಿಯ ನೀರುಗುಂದ, ಸೋಮವಾರಪೇಟೆ ತಾಲೂಕಿನ ಕಾರೆಕೊಪ್ಪ, ಕಕ್ಕೆಹೊಳೆ,ಗೋಪಾಲಪುರ, ಚೇರಳ ಶ್ರೀಮಂಗಲ, ಸುಂಟಿಕೊಪ್ಪದ ಎಮ್ಮೆಗುಂಡಿ ರಸ್ತೆ, ಕುಶಾಲನಗರದ ಬೈಚನಹಳ್ಳಿ, ಕೋಣ ಮಾರಿಯಮ್ಮ ದೇವಸ್ಥಾನ, ಮಡಿಕೇರಿಯ ಗದ್ದುಗೆ.
ಜಿಲ್ಲೆಯಲ್ಲಿ ನೆಲ್ಲಿಹುದಿಕೇರಿಯ ಬೆಟ್ಟದಕಾಡು, ವೀರಾಜಪೇಟೆ ತಾಲೂಕಿನ ಹೊಲಮಾಳ ಹಾಗೂ ಪಾಲಿಬೆಟ್ಟವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News