ಕೊರೋನ ಪರೀಕ್ಷೆಯ ವರದಿ ಬರುವವರೆಗೂ ಐಸೋಲೇಷನ್ ಕಡ್ಡಾಯ: ಆರೋಗ್ಯ ಇಲಾಖೆ

Update: 2020-07-13 17:18 GMT

ಬೆಂಗಳೂರು, ಜು.13: ಕೊರೋನ ಸೋಂಕಿನ ಪರೀಕ್ಷೆಗೆ ಮಾದರಿ ಕೊಟ್ಟಿರುವವವರು ಐಸೋಲೇಷನ್‍ನಲ್ಲಿ ಇರುವುದು ಕಡ್ಡಾಯವಾಗಿದ್ದು, ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಈ ಕುರಿತು ಸೋಮವಾರ ಆದೇಶ ಹೊರಡಿಸಿರುವ ಆರೋಗ್ಯ ಇಲಾಖೆ, ಕೊರೋನ ಸೋಂಕಿನ ಪರೀಕ್ಷೆಗೆ ಮಾದರಿ ಕೊಟ್ಟಿದ್ದಲ್ಲಿ ಫಲಿತಾಂಶ ಬರುವವರೆಗೂ ಆ ವ್ಯಕ್ತಿಗಳು ಐಸೋಲೇಷನ್‍ನಲ್ಲಿರುವುದು ಕಡ್ಡಾಯವಾಗಿದೆ. ಒಂದು ವೇಳೆ ಮಾದರಿ ಕೊಟ್ಟಿರುವ ವ್ಯಕ್ತಿ ಫಲಿತಾಂಶ ಬರುವುದಕ್ಕೂ ಮೊದಲು ಸಾರ್ವಜನಿಕ ಸ್ಥಳದಲ್ಲಿ ಸಂಚಾರ ನಡೆಸುವುದು, ಕಚೇರಿಗೆ ಹೋಗುವುದು, ಅನಗತ್ಯವಾಗಿ ತಿರುಗಾಡುವುದನ್ನು ಮಾಡುವಂತಿಲ್ಲ ಎಂದು ಎಚ್ಚರಿಕೆ ನೀಡಿದೆ.

ಕೊರೋನ ಪರೀಕ್ಷೆ ಮಾದರಿ ಕೊಟ್ಟು ಫಲಿತಾಂಶ ಬರುವುದಕ್ಕೂ ಮೊದಲು ವ್ಯಕ್ತಿ ಐಸೋಲೇಷನ್ ನಿಮಯಗಳನ್ನು ಮೀರಿ ಸಂಚಾರ ನಡೆಸಿದರೆ ಸಾಂಕ್ರಾಮಿಕ ರೋಗಗಳ ಕಾಯಿದೆ 1897ರ ಅನ್ವಯ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮಗಳನ್ನಯ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News