ಸರಕಾರ ತನಗೇ ಕೊರೋನ ಬಂದಂತೆ ಆಡುತ್ತಿದೆ: ವಾಟಾಳ್ ನಾಗರಾಜ್

Update: 2020-07-13 18:06 GMT

ಬೆಂಗಳೂರು, ಜು.13: ಕೊರೋನ ವೈರಸ್ ಸೋಂಕು ತಡೆಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಂದು ವಾರ ಕಾಲ ಲಾಕ್‍ಡೌನ್ ಘೋಷಣೆಯಾಗಿದೆ. ಬೆಂಗಳೂರಿನಿಂದ ವಲಸೆ ಹೋಗುವವರನ್ನು ಸರಕಾರ ತಡೆಗಟ್ಟುವ ಕೆಲಸ ಮಾಡುವ ಬದಲು ಸರಕಾರ ತನಗೇ ಕೊರೋನ ಬಂದಂತೆ ಆಡುತ್ತಿದೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಿಂದ 25 ಲಕ್ಷಕ್ಕೂ ಹೆಚ್ಚು ಜನರು ವಲಸೆ ಹೋಗಿದ್ದಾರೆ. ಅವರನ್ನು ತಡೆಯೋಕೆ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಜನಸಾಮಾನ್ಯರು, ಬೆಂಗಳೂರು ಬಿಡದ ಹಾಗೆ ವ್ಯವಸ್ಥೆ ಮಾಡಲಿ. ವಿರೋಧ ಪಕ್ಷಗಳೂ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಮೊದಲು ಆಸ್ಪತ್ರೆ, ವೈದ್ಯರು, ಔಷಧಿ ಇತರ ವ್ಯವಸ್ಥೆಗಳನ್ನು ಸರಿ ಮಾಡಬೇಕೆಂದು ಹೇಳಿದರು.

ರಾಜ್ಯದ ಗಡಿ ಭಾಗಗಳನ್ನು ಬಂದ್ ಮಾಡಬೇಕು. ಮಹಾರಾಷ್ಟ್ರದಿಂದ ರೈಲುಗಳನ್ನು ಬಿಟ್ಟದ್ದು ಏಕೆ ಎಂದು ಪ್ರಶ್ನಿಸಿ, ಬೇರೆ ರಾಜ್ಯಗಳಿಂದಲೇ ಕರ್ನಾಟಕದಲ್ಲಿ ಸೋಂಕು ಹೆಚ್ಚಾಗಿದೆ ಎಂದು ಹೇಳಿದರು.

ಪರೀಕ್ಷೆ ಇಲ್ಲದೆ ಪಾಸ್ ಮಾಡಿ: ಎಲ್ಲ ವಿದ್ಯಾರ್ಥಿಗಳನ್ನೂ ಪರೀಕ್ಷೆ ಇಲ್ಲದೆ ಪಾಸ್ ಮಾಡಬೇಕು. ಅಂತಿಮ ವರ್ಷದ ವಿದ್ಯಾರ್ಥಿಗಳಿಗೂ ಪರೀಕ್ಷೆ ನಡೆಸದೆ ಪಾಸ್ ಮಾಡಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News