×
Ad

ಆಲಮಟ್ಟಿ ಜಲಾಶಯದಿಂದ ಕೃಷಿ ಚಟುವಟಿಕೆಗಳಿಗೆ ನೀರು ಹರಿಸಲು ಡಿಸಿಎಂ ಕಾರಜೋಳ ಸೂಚನೆ

Update: 2020-07-14 16:18 IST

ವಿಜಯಪುರ, ಜು.14: ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ವಿಜಯಪುರದ ಆಲಮಟ್ಟಿ ಮತ್ತು ಯಾದಗಿರಿಯ ನಾರಾಯಣಪುರ ಜಲಾಶಯಗಳಿಂದ ಜು.21ರಿಂದ ನೀರು ಹರಿಸಲು ಪ್ರಾರಂಭಿಸುವಂತೆ ಡಿಸಿಎಂ ಗೋವಿಂದ ಕಾರಜೋಳ ಆದೇಶಿಸಿದ್ದಾರೆ.

2020&21ನೇ ಸಾಲಿನ ಕಾಲುವೆ ಜಾಲದ ಕ್ಲೋಜರ್‌ ಕಾಮಗಾರಿ ಜುಲೈ 20ರೊಳಗಾಗಿ ಪೂರ್ಣಗೊಳಿಸಿ ನೀರು ಒದಗಿಸುವಂತೆ ಹೇಳಿದ್ದಾರೆ. ಇನ್ನು ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಕಡಿಮೆ ಆಗುವ ವರೆಗೂ ಕಾಲುವೆಗೆ ನೀರು ಹರಿಸಲು ಹಾಗೂ ಒಳಹರಿವು ಸ್ಥಗಿತವಾದ ನಂತರ ಹಿಂಗಾರಿಗೆ ನಾರಾಯಣಪುರ ಜಲಾಶಯದ ಕಾಲುವೆಯಿಂದ 14 ದಿನ ನೀರು ಹರಿಸಿ, 8 ದಿನ್‌ ಬಂದ್‌ ಹಾಗೂ ಆಲಮಟ್ಟಿ ಜಲಾಶಯದಿಂದ ಕಾಲುವೆಗಳಿಗೆ 8 ದಿನ ಹರಿಸಿ, 7 ದಿನ ಬಂದ್ ಪದ್ಧತಿ ಅನುಸರಿಸಿ ನೀರು ಹರಿಸಲಾಗುವುದು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News