ಕಲಬುರಗಿ: ಜಯದೇವ ಆಸ್ಪತ್ರೆಯ 21 ಸಿಬ್ಬಂದಿಗೆ ಕೊರೋನ ಪಾಸಿಟಿವ್

Update: 2020-07-15 09:55 GMT

ಕಲಬುರಗಿ, ಜು.15: ಇಲ್ಲಿನ ಜಯದೇವ ಆಸ್ಪತ್ರೆಯ ಐವರು ವೈದ್ಯರು ಸೇರಿದಂತೆ 21 ಸಿಬ್ಬಂದಿಗೆ ಕೊರೋನ ತಗಲಿರುವುದು ದೃಢಪಟ್ಟಿದೆ.

ಇಬ್ಬರು ರೋಗಿಗಳು ಕೊರೋನ ವೈರಸ್ ಸೋಂಕಿನ ಬಗ್ಗೆ ಅಜಾಗೃತೆ ತೋರಿರುವುದರಿಂದ ಆಸ್ಪತ್ರೆಯ ಸಿಬ್ಬಂದಿ ಹಾಗೂ ರೋಗಿಗಳಲ್ಲಿ ಆತಂಕ ಮನೆ ಮಾಡಿದೆ.

ಕೆಲವು ದಿನಗಳ ಹಿಂದೆ ಆಸ್ಪತ್ರೆಯ ವೈದ್ಯರು ಓರ್ವ ರೋಗಿಗೆ ಆ್ಯಂಜಿಯೋಗ್ರಾಂ ಶಸ್ತ್ರಚಿಕಿತ್ಸೆ ಮಾಡಿದರು. ಚಿಕಿತ್ಸೆ ನೀಡಿದ ಬಳಿಕ ರೋಗಿಗೆ ಕೊರೋನ ಪಾಸಿಟಿವ್ ಇರುವುದು ದೃಢಪಟ್ಟಿತ್ತೆನ್ನಲಾಗಿದೆ.

ಇದೀಗ ಆಸ್ಪತ್ರೆಯ ಐವರು ವೈದ್ಯರು ಸೇರಿ ಒಟ್ಟು 21 ಸಿಬ್ಬಂದಿಗೆ ಕೊರೋನ ಸೋಂಕು ತಗುಲಿದೆ ಎಂದು ತಿಳಿದುಬಂದುದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News