ರಾಜ್ಯದಲ್ಲಿ ಕೋವಿಡ್19 ಹೊಸ ದಾಖಲೆ: ಒಂದೇ ದಿನ 3 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ದೃಢ

Update: 2020-07-15 15:02 GMT

ಬೆಂಗಳೂರು, ಜು.15: ಕರ್ನಾಟಕದಲ್ಲಿ ಕೊರೋನ ಸೋಂಕಿತರ ಸಂಖ್ಯೆಯಲ್ಲಿ ದಿನೇ ದಿನೇ ಹೆಚ್ಚಳವಾಗುತ್ತಿದೆ. ಸೋಂಕಿತರು ಸಾವನ್ನಪ್ಪುತ್ತಿರುವ ಪ್ರಕರಣದಲ್ಲೂ ಏರಿಕೆಯಾಗುತ್ತಿದೆ. ಕೆಲ ದಿನಗಳಿಂದ ದೈನಂದಿನ 2 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿದ್ದವು. ಆದರೆ ಇಂದು ಇದೇ ಮೊದಲ ಬಾರಿ 3 ಸಾವಿರದ ಗಡಿ ದಾಟಿದೆ.

ಮಂಗಳವಾರ ಸಂಜೆಯಿಂದ ಬುಧವಾರ ಸಂಜೆವರೆಗೆ ಮತ್ತೆ 3,176 ಮಂದಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 47,253 ಕ್ಕೆ ಏರಿಕೆಯಾಗಿದೆ. 24 ಗಂಟೆಗಳಲ್ಲಿ 87 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 928ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ ಒಂದೇ ದಿನ 60 ಮಂದಿ ಕೊರೋನ ಸೋಂಕಿಗೆ ಬಲಿಯಾಗಿದ್ದಾರೆ. ಉಳಿದಂತೆ ಮೈಸೂರು 6, ಧಾರವಾಡ 5, ಉತ್ತರ ಕನ್ನಡ 3, ಬಾಗಲಕೋಟೆ 3, ಚಿಕ್ಕಬಳ್ಳಾಪುರ 2, ರಾಯಚೂರು 2, ತುಮಕೂರು, ರಾಮನಗರ, ಚಿತ್ರದುರ್ಗ, ಶಿವಮೊಗ್ಗ, ಮಂಡ್ಯ, ಚಿಕ್ಕಮಗಳೂರು ಜಿಲ್ಲೆಯಲ್ಲಿ ತಲಾ ಒಂದು ಸಾವು ಸಂಭವಿಸಿದೆ.

ಸೋಂಕು ಖಚಿತಗೊಂಡ ಪ್ರಕರಣಗಳ ಪೈಕಿ ಬೆಂಗಳೂರು ನಗರ 1,975, ಧಾರವಾಡ 139, ಬಳ್ಳಾರಿ 136, ಮೈಸೂರು 99, ವಿಜಯಪುರ 80, ದಕ್ಷಿಣ ಕನ್ನಡ 76, ಕಲಬುರಗಿ 67, ಉಡುಪಿ 52, ಯಾದಗಿರಿ 49, ಉತ್ತರ ಕನ್ನಡ 48, ಬೆಳಗಾವಿ 41, ಗದಗ 39, ಬೀದರ್ 35, ದಾವಣಗೆರೆ 35, ಬಾಗಲಕೋಟೆ 34, ಚಿಕ್ಕಬಳ್ಳಾಪುರ 32, ಮಂಡ್ಯ 31, ಶಿವಮೊಗ್ಗ 29, ರಾಯಚೂರು 26, ಹಾಸನ 25,  ತುಮಕೂರು 24, ಕೊಡಗು 23, ಕೋಲಾರ 15, ಕೊಪ್ಪಳ 14, ಚಿಕ್ಕಮಗಳೂರು 13, ಚಿತ್ರದುರ್ಗ 12, ಬೆಂಗಳೂರು ಗ್ರಾಮಾಂತರ 10, ಚಾಮರಾಜನಗರ 8, ಹಾವೇರಿ 6, ರಾಮನಗರದಲ್ಲಿ 3 ಪ್ರಕರಣ ಪಾಸಿಟಿವ್ ಬಂದಿದೆ.

ಒಟ್ಟಾರೆ ರಾಜ್ಯದಲ್ಲಿ 47,253 ಕೊರೋನ ಸೋಂಕಿತರ ಪೈಕಿ 18,466 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇದರಲ್ಲಿ ಇಂದು ಒಂದೇ ದಿನ 1,076 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ ಇದುವರೆಗೆ 928 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 27,853 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News