ವಿವಿಧ ಬೇಡಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರಿಂದ ಪೋಸ್ಟ್ ಕಾರ್ಡ್ ಚಳವಳಿ

Update: 2020-07-15 17:37 GMT

ಬೆಂಗಳೂರು, ಜು.15: ಮಾಸಿಕ 12 ಸಾವಿರ ರೂ. ಗೌರವ ಧನ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಬುಧವಾರ ಪೋಸ್ಟ್ ಕಾರ್ಡ್ ಚಳವಳಿ ನಡೆಸಿದರು.

ಕಳೆದ 7 ದಿನಗಳಿಂದ ಕೆಲಸ ಸ್ಥಗಿತಗೊಳಿಸಿ ಮನೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಬುಧವಾರ ಆಶಾ ಕಾರ್ಯಕರ್ತೆಯರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪೋಸ್ಟ್ ಕಾರ್ಡ್ ಬರೆಯುವ ಮೂಲಕ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.

ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಮಾತನಾಡಿ, ರಾಜ್ಯದ 42,000 ಆಶಾಕಾರ್ಯಕರ್ತೆಯರು  ಅತ್ಯಂತ ಸಮರಶೀಲವಾಗಿಯೂ ಮತ್ತು ಶಿಸ್ತಿನಿಂದಲೂ ಕಳೆದ 16 ದಿನಗಳಿಂದಲೂ ವಿವಿಧ ಹಂತದ ಹೋರಾಟ ಮಾಡುತ್ತಿದ್ದಾರೆ. ಇವರ ಈ ಹೋರಾಟ ರಾಜ್ಯದ ಜನತೆಯ ಮನ ಗೆದ್ದಿದೆ. 16 ದಿನಗಳ ಸುಧೀರ್ಘ ಹೋರಾಟ ನಡೆಸಿದರೂ ಸಮಸ್ಯೆಗಳ ಕುರಿತು ಮಾತುಕತೆ ಯನ್ನು ನಡೆಸುವ ಸೂಕ್ಷ್ಮತೆಯಿಲ್ಲದ ಸರಕಾರದ ವಿರುದ್ಧ ಆಶಾಕಾರ್ಯಕರ್ತೆಯರು ಮಾತ್ರವಲ್ಲ ರಾಜ್ಯದಾದ್ಯಂತ ಜನರ ಆಕ್ರೋಶವೂ ಹೆಚ್ಚುತ್ತಿದೆ ಎಂದರು.

ಮಾಸಿಕ 12 ಸಾವಿರ ರೂ. ಗೌರವ ಧನ ನೀಡಬೇಕು. ಕೊರೋನ ಸೋಂಕಿನ ವಿರುದ್ಧ ಹೋರಾಡುತ್ತಿರುವ ಕಾರ್ಯಕರ್ತೆಯರಿಗೆ ಮುಖಗವಸು (ಮಾಸ್ಕ್), ಸ್ಯಾನಿಟೈಜರ್, ಕೈಚೀಲ (ಗ್ಲೌಸ್) ಗಳನ್ನು ನೀಡಿ ಇವರ ಆರೋಗ್ಯ ವನ್ನು ಕಾಪಾಡಬೇಕು. ರೈತ ಸಂಘಟನೆ ಗಳ ಮುಖಂಡರು, ಯುವಜನ ಸಂಘಟನೆಗಳ ಮುಖಂಡರು ರಾಜ್ಯದ ನಡೆಯುತ್ತಿರುವ ಮಹಿಳಾ ಕಾರ್ಮಿಕರ ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News