ಬಂಡೀಪುರ 6,946 ಎಕರೆ ಅರಣ್ಯ ಒತ್ತುವರಿಗೆ ಅಧಿಕಾರಿಗಳ ನಿರ್ಲಕ್ಷ್ಯ ?

Update: 2020-07-15 17:57 GMT
ಸಾಂದರ್ಭಿಕ ಚಿತ್ರ

ಗುಂಡ್ಲುಪೇಟೆ, ಜು14: ಬಂಡೀಪುರ ಅಭಯಾರಣ್ಯ ವ್ಯಾಪ್ತಿಯಲ್ಲಿ 6946 ಎಕರೆ ಅರಣ್ಯ ಪ್ರದೇಶವು ಒತ್ತುವರಿಯಾಗಿರುವ ವಿಷಯ ಅರಣ್ಯ ಇಲಾಖೆಯಿಂದ ತಡವಾಗಿ ಬೆಳಕಿಗೆ ಬಂದಿದೆ

ಹಲವು ವರ್ಷಗಳಿಂದ ಪ್ರಭಾವಿ ರಾಜಕಾರಣಿಗಳು, ಉದ್ಯಮಿಗಳು ಪ್ರಭಾವಿ ಹಾಗೂ ರಾಜಕಾರಣಿಗಳ ಸಹಾಯದಿಂದ ವನ್ಯಜೀವಿ ತಾಣವನ್ನೇ ಬಿಡದೆ ಆವರಿಸಿಕೊಂಡು ರೆಸಾರ್ಟ್ ಫಾರ್ಮ್ ಹೌಸ್ ನಿರ್ಮಾಣ ಮಾಡಿ ಕಾನೂನುಬಾಹಿರ ವ್ಯವಹಾರ ನಡೆಸುತ್ತಿರುವುದು ಅನೇಕ ಬಾರಿ ಬಹಿರಂಗವಾಗಿದೆ. ಇದನ್ನು ತೆರವುಗೊಳಿಸಿ ಅರಣ್ಯ ಇಲಾಖೆಯ ವಶಕ್ಕೆ ಪಡೆಯುವ ಕೆಲಸಕ್ಕೆ ಮುಂದಾಗದೇ ಇರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಬಂಡೀಪುರ ಅಭಯಾರಣ್ಯ ವ್ಯಾಪ್ತಿಗೆ ಸೇರಿದ ಏಳು ವಲಯಗಳಲ್ಲಿ 6946.19 ಎಕರೆ ಅರಣ್ಯ ಪ್ರದೇಶ ಒತ್ತುವರಿಯಾಗಿದೆ. ಅತಿ ಹೆಚ್ಚು ಅರಣ್ಯ ಪ್ರದೇಶ ಒತ್ತವರಿಯಾಗಿರುವ ಓಂಕಾರ ವಲಯ ವ್ಯಾಪ್ತಿಯಲ್ಲಿ 4372 ಎಕರೆ, ನಾಗಪುರ ಬಾಕ್ ಮೂರರಲ್ಲಿ 15 ಎಕರೆ, ಬೊಳೇಗೌಡನಕಟ್ಟೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ 3,699 ಎಕರೆ, ದೇಶಿಪುರ ಮೀಸಲು ಅರಣ್ಯದಲ್ಲಿ 658 ಎಕರೆ, ನುಗು ವಲಯದಲ್ಲಿ ಲಕ್ಷಣಪುರ ಮೀಸಲು ಅರಣ್ಯದಲ್ಲಿ 179 ಎಕರೆ, ಹೆಡಿಯಾಲ ವಲಯದಲ್ಲಿ ನಾಗಣಪುರ ಮೀಸಲು ಅರಣ್ಯ1ರಲ್ಲಿ 31 ನಾಗಣಪುರ ಮೀಸಲು ಅರಣ್ಯದಲ್ಲಿ 2 ರಲ್ಲಿ 803 ಎಕರೆ, ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ ಸೋಮನಪುರ ಮೀಸಲು ಅರಣ್ಯದಲ್ಲಿ 12 ಎಕರೆ, ಮೊಳೆಯೂರು ವಲಯದಲ್ಲಿ 728 ಎಕರೆ ಹಾಗೂ ಕುಂದಕೆರೆ ವಲಯದಲ್ಲಿ ಹೆಗ್ಗವಾಡಿ ಮೀಸಲು ಅರಣ್ಯ 2ರಲ್ಲಿ 171 ಎಕರೆ ಅರಣ್ಯ ಪ್ರದೇಶ ಗುಂಡ್ಲುಪೇಟೆ ಬಫರ್ ಜೋನ್ ವಲಯದಲ್ಲಿ ನೇನೆಕಟ್ಟೆ ಮೀಸಲು ಅರಣ್ಯ ಪ್ರದೇಶದಲ್ಲಿ 395 ಎಕರೆ, ಭೀಮನಬಿಡು  ಮೀಸಲು ಅರಣ್ಯದಲ್ಲಿ 24 ಎಕರೆ, ಪುತ್ತನಪುರ ಮೀಸಲು ಅರಣ್ಯದಲ್ಲಿ 229 ಎಕರೆ ಒಟ್ಟು 648 ಎಕರೆ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ದಿವಂಗತ ಹೆಚ್.ಎಸ್ ಮಹದೇವಪ್ರಸಾದ್ ಸಂಬಂಧಿಯೊಬ್ಬರು ತಾಲೂಕಿನ ಹೊಂಗಹಳ್ಳಿ ಸರ್ವೆ ನಂಬರ್ 78ರಲ್ಲಿ 31 ಎಕರೆ 38 ಗುಂಟೆ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಅಂದಿನ ಮದ್ದೂರು ವಲಯ ಉಪ ಅರಣ್ಯಾ ಸಂರಕ್ಷಣಾಧಿಕಾರಿ ಎಸ್.ಗೋವಿಂದಯ್ಯ ಐಫ್ಐಆರ್ ದಾಖಲಿಸಿದ್ದರು. 2018ರಲ್ಲಿ 31 ಎಕರೆ ಒತ್ತುವರಿಯನ್ನು ತೆರವುಗೊಳಿಸಿ ಅರಣ್ಯ ಇಲಾಖೆ ತನ್ನ ವಶಕ್ಕೆ ಪಡೆದುಕೊಂಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದ

ಇಲಾಖೆಯ ಮೌನಕ್ಕೆ ಕಾರಣವೇನು?: ಇಷ್ಟೆಲ್ಲ ಅಕ್ರಮ ಒತ್ತುವರಿ ಪ್ರಕರಣಗಳು ಚಾಲ್ತಿಯಲ್ಲಿದ್ದರೂ ಸಹ ಅರಣ್ಯ ಇಲಾಖೆ ಅಧಿಕಾರಿಗಳು ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕರು, ಪರಿಸರ ಪ್ರೇಮಿಗಳು ಆರೋಪಿಸಿದ್ದಾರೆ. ವನ್ಯ ಪ್ರಾಣಿಗಳನ್ನು ಮತ್ತು ಸಂಪದ್ಭರಿತ ಕಾಡನ್ನು ರಕ್ಷಿಸಲು ಮುಂದಾಗಬೇಕಿದ್ದ ಅಧಿಕಾರಿಗಳು ಯಾರ ಕೃಪಾಕಟಾಕ್ಷಕ್ಕೆ ಒಳಗಾಗಿದ್ದಾರೆ ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಪ್ರಶ್ನೆ.

7000 ಎಕರೆ ಅರಣ್ಯ ಪ್ರದೇಶ ಒತ್ತುವರಿ ಆಗಿರುವುದು ಕಂಡು ಬಂದಿದೆ. ಈಗಾಗಲೇ ಇದರ ಬಗ್ಗೆ ಕ್ರವ ವಹಿಸುವಂತೆ ಆಯಾಯ ವಲಯಾಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಒತ್ತುವರಿ ತೆರವುಗೊಳಿಸಲಾಗುವುದು ಹಾಗೇ ಮೂರು ಎಕರೆ ಪ್ರದೇಶವನ್ನು ಒತ್ತುವರಿ ಮಾಡಿಕೊಂಡಿರುವವರ ಮೇಲೆ ದೂರು ದಾಖಲಿಸಲಾಗುವುದು

ಟಿ.ಬಾಲಚಂದ್ರ
ಬಂಡೀಪುರ ಅರಣ್ಯ ಸಂರಕ್ಷಾಧಿಕಾರಿ ಹಾಗೂ ಹುಲಿ ಯೋಜನ ನಿದೇಶಕರು

ಬಂಡೀಪುರ ಸುತ್ತಮುತ್ತ ಪ್ರಭಾವಿ ರಾಜಕಾರಣಿ, ಉದ್ಯಮಿಗಳು, ಸಾವಿರಾರು ಎಕರೆ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿದ್ದರೂ ಇಲಾಖೆ ಕಣ್ಣುಮುಚ್ಚಿಕೊಂಡಿರುವುದು ಏಕೆ? ಇಲಾಖೆಯೇ ಇದಕ್ಕೆ ಕುಮ್ಮಕ್ಕು ನೀಡುತ್ತಿದೆಯೇ ಎಂಬ ಪ್ರಶ್ನೆ ಉಂಟಾಗುತ್ತದೆ. ಕೂಡಲೇ ಒತ್ತುವರಿ ತೆರವುಗೊಳಿಸಿ, ಇಲ್ಲ ಪ್ರತಿಭಟನೆ ಎದುರಿಸಬೇಕಾಗುತ್ತದೆ.

ಕಡಬೂರು ಮಂಜುನಾಥ, ಜಿಲ್ಲಾ ಹಸಿರು ಸೇನೆ ಸಂಚಾಲಕ

Writer - ಮಹದೇವಪ್ರಸಾದ್ ಹಂಗಳ

contributor

Editor - ಮಹದೇವಪ್ರಸಾದ್ ಹಂಗಳ

contributor

Similar News