ಕೊರೋನ ಸೋಂಕಿಗೆ ಎಎಸ್‍ಐ ಬಲಿ

Update: 2020-07-15 18:17 GMT

ಹುಬ್ಬಳ್ಳಿ, ಜು.15: ಹುಬ್ಬಳ್ಳಿ ನಗರದ 55 ವರ್ಷದ ಎಎಸ್‍ಐ ಕೊರೋನ ಸೋಂಕಿನಿಂದ ಮೃತಪಟ್ಟಿದ್ದು, ಪೊಲೀಸರೊಬ್ಬರು ಸಾವನ್ನಪ್ಪಿರುವ ಮೊದಲ ಪ್ರಕರಣ ಇದಾಗಿದೆ.

ಧಾರವಾಡ ಜಿಲ್ಲೆಯಲ್ಲಿ ಕೊರೋನ ವಾರಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಇವರು, ಕೊರೋನ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಜು.1ರಿಂದ ಹೋಂ ಕ್ವಾರಂಟೈನ್‍ಗೆ ಒಳಪಡಿಸಿ, ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು.

ಜು.7ರಂದು ಅವರಿಗೆ ಸೋಂಕು ಇರುವುದು ದೃಢಪಟ್ಟಿದ್ದರಿಂದ ಕೊರೋನ ಆಸ್ಪತ್ರೆ ಕಿಮ್ಸ್‍ಗೆ ದಾಖಲಿಸಲಾಗಿತ್ತು. ಹಾವೇರಿ ಮೂಲದವರಾಗಿದ್ದ ಎಎಸ್‍ಐ ಅವರು, ಕೆಲ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News