ಬಿಜೆಪಿ ಶಾಸಕನ ಸಾವಿನ ಪ್ರಕರಣ ಶಂಕಿತ ಆತ್ಮಹತ್ಯೆ: ರಾಷ್ಟ್ರಪತಿಗೆ ಮಮತಾ ಬ್ಯಾನರ್ಜಿ ಪತ್ರ

Update: 2020-07-15 18:58 GMT

ಕೋಲ್ಕತಾ, ಜು.15: ಬಿಜೆಪಿ ಶಾಸಕ ದೇಬೇಂದ್ರನಾಥ್ ರಾಯ್ ಅವರು ಮೃತಪಟ್ಟಿರುವ ಪ್ರಕರಣವು ಶಂಕಿತ ಆತ್ಮಹತ್ಯೆ ಪ್ರಕರಣವಾಗಿದ್ದು ರಾಜಕೀಯಕ್ಕೆ ಸಂಬಂಧಿಸಿದ್ದಲ್ಲ ಎಂದು ಟಿಎಂಸಿ ನಾಯಕಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಷ್ಟ್ರಪತಿಯವರಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.

ಶಾಸಕ ರಾಯ್ ಸಾವು ಶಂಕಿತ ಆತ್ಮಹತ್ಯೆಯ ಪ್ರಕರಣ ಅಥವಾ ಸ್ಥಳೀಯವಾಗಿ ಹಣ ವರ್ಗಾವಣೆ ಚಟುವಟಿಕೆಗೆ ಸಂಬಂಧಿಸಿ ನಡೆದಿದೆ ಎಂದು ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಪ್ರಾಥಮಿಕ ತನಿಖೆಯನ್ನು ಆಧರಿಸಿ ರಾಜ್ಯದ ಪೊಲೀಸರು ವರದಿ ಸಲ್ಲಿಸಿದ್ದಾರೆ. ಮೃತ ಶಾಸಕರ ಜೇಬಿನಲ್ಲಿದ್ದ ಪತ್ರದಲ್ಲೂ, ಸ್ಥಳೀಯವಾಗಿ ಹಣ ವರ್ಗಾವಣೆ ಚಟುವಟಿಕೆ ನಡೆಸುತ್ತಿದ್ದ ಇಬ್ಬರು ವ್ಯಕ್ತಿಗಳ ಹೆಸರನ್ನು ಉಲ್ಲೇಖಿಸಲಾಗಿದೆ. ಆದ್ದರಿಂದ ಈ ಪ್ರಕರಣ , ಬಿಜೆಪಿ ಕಲ್ಪಿಸಿರುವಂತೆ ರಾಜಕೀಯಕ್ಕೆ ಸಂಬಂಧಿಸಿದ್ದಲ್ಲ ಎಂದು ಹೇಳಲು ಬೇಸರವಾಗುತ್ತದೆ ಎಂದು ಮಮತಾ ಬ್ಯಾನರ್ಜಿ ಪತ್ರದಲ್ಲಿ ಹೇಳಿದ್ದಾರೆ.

ಟಿಎಂಸಿಯ ನಿಯೋಗವೊಂದು ಟಿಎಂಸಿ ಸಂಸದೀಯ ಪಕ್ಷದ ಮುಖಂಡ ಡೆರೆಕ್ ಒಬ್ರಿಯಾನ್ ನೇತೃತ್ವದಲ್ಲಿ ರಾಷ್ಟ್ರಪತಿಯನ್ನು ಭೇಟಿಮಾಡಿ ಬಿಜೆಪಿ ಶಾಸಕರ ಮರಣಕ್ಕೆ ಸಂಬಂಧಿಸಿದ ವಾಸ್ತವ ವಿಷಯ ಹಾಗೂ ವಿವರವನ್ನು ಒದಗಿಸಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News