×
Ad

ಅಂಜುಮನ್ ಪಿಯು ಕಾಲೇಜಿನ ಝೈನಬ್ ಮತ್ತು ಸಕೀನಾ ಭಟ್ಕಳ ತಾಲೂಕಿಗೆ ಟಾಪರ್

Update: 2020-07-16 15:50 IST

ಭಟ್ಕಳ: ಇಲ್ಲಿನ ಪ್ರತಿಷ್ಠಿತ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮನ್ ಬಾಲಕೀಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಝೈನಬ್ ಸೈಯ್ಯದ್ ಉಸ್ಮಾನ್ 582 ಅಂಕಗಳನ್ನು ಪಡೆದು (ಶೇ.97%) ವಿಜ್ಞಾನ ವಿಭಾಗದಲ್ಲಿ ಹಾಗೂ 558 ಅಂಕ ಪಡೆದ(93%) ಸಕೀನಾ ಇಲ್ಫಾ ಅಬ್ದುಲ್ ಕರೀಮ್ ಖಾನ್ ಕಲಾ ವಿಭಾಗದಲ್ಲಿ ಭಟ್ಕಳ ತಾಲೂಕಿಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ನಿಮ್ರಾ ನದೀಮ್ ಶಾಬಂದ್ರಿ ಶೇ.97.16% ಅಂಕ ಪಡೆದು ಭಟ್ಕಳ ತಾಲೂಕಿಗೆ 3ನೇ ಸ್ಥಾನ ಮತ್ತು ಕಾಲೇಜು ಟಾಪರ್ ಆಗಿದ್ದಾಳೆ ಎಂದು ಕಾಲೇಜಿನ ಪ್ರಾಂಶುಪಾಲೆ ಫರ್ಝಾನಾ ಮೊಹತೆಶಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂಜುಮನ್ ಬಾಲಕಿಯರ ಪದವಿ ಪೂರ್ವ ಕಾಲೇಜು ಶೇ.89.28% ಫಲಿತಾಂಶ ದಾಖಲಿಸಿದ್ದು, 61 ವಿದ್ಯಾರ್ಥಿನೀಯರು ಉನ್ನತ ಶ್ರೇಣಿಯಲ್ಲಿ, 165 ವಿದ್ಯಾರ್ಥಿನೀಯರು ಪ್ರಥಮ ದರ್ಜೆಯಲ್ಲಿ ಹಾಗೂ 30 ವಿದ್ಯಾರ್ಥಿನೀಯರು ದ್ವಿತೀಯಾ ದರ್ಜೆಯಲ್ಲಿ ತೇರ್ಗಡೆಗೊಂಡಿದ್ದಾರೆ. ವಿವಿಧ ವಿಷಯಗಳಲ್ಲಿ 17 ವಿದ್ಯಾರ್ಥಿಗಳು ಶೇ.100 ಅಂಕಗಳನ್ನು ಪಡೆದುಕೊಂಡಿದ್ದಾರೆ. 

ವಿದ್ಯಾರ್ಥಿಗಳ ಸಾಧನೆಗೆ ಅಂಜುಮನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕಾಜಿಯಾ ಮುಹಮ್ಮದ್ ಮುಝಮ್ಮಿಲ್, ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಇಸ್ಮಾಯಿಲ್, ಅಡಿನಷನಲ್ ಕಾರ್ಯದರ್ಶಿ ಇಸ್ಹಾಖ್ ಶಾಬಂದ್ರಿ ಹಾಗೂ ಕಾಲೇಜಿನ ಉಪನ್ಯಾಸಕ ವರ್ಗ ಅಭಿನಂದಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News