ಪಿಯು ಫಲಿತಾಂಶ: ಅಂಜುಮನ್ ಕಾಲೇಜಿನ ದರ್ಶನ್ ಗೌಡ ಶೇ.90, ರೈಹಾನ್ ಗೆ ಶೇ.89 ಅಂಕ

Update: 2020-07-16 10:34 GMT

ಭಟ್ಕಳ: ಇಲ್ಲಿನ ಪ್ರತಿಷ್ಠಿತ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮನ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ದರ್ಶನ್ ಗೌಡ ಕಲಾ ವಿಭಾಗದಲ್ಲಿ ಶೇ.90% ಅಂಕಗಳೊಂದಿಗೆ ಕಾಲೇಜ್ ಟಾಪರ್ ಆಗಿದ್ದು, ವಾಣಿಜ್ಯ ವಿಭಾಗದಲ್ಲಿ ಮುಹಮ್ಮದ್ ರೈಹಾನ್ ಶೇ.89.50, ವಿಜ್ಞಾನ ವಿಭಾಗದಲ್ಲಿ ಮುಹಮ್ಮದ್ ಹುಸೇನ್ ಕೋಲಾ 84.16 ಅಂಕಗಳೊಂದಿಗೆ ಕಾಲೇಜ್ ಟಾಪರ್ ಆಗಿದ್ದಾರೆ ಎಂದು ಪ್ರಾಂಶುಪಾಲ್ ಯೂಸೂಫ್ ಕೋಲಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಭೌತಶಾಸ್ತ್ರದಲ್ಲಿ ಶೇ.96.22, ರಾಸಾಯನ ಶಾಸ್ತ್ರದಲ್ಲಿ ಶೇ.79.24, ಗಣಿತದಲ್ಲಿ ಶೇ.88.67, ಜೀವಶಾಸ್ತ್ರದಲ್ಲಿ ಶೇ.96. ಹಾಗೂ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಶೇ.100 ಫಲಿತಾಂಶ ಬಂದಿದ್ದು, ಮುಹಮ್ಮದ್ ರೈಹಾನ್ ಅಕೌಂಟೆನ್ಸಿಯಲ್ಲಿ 100 ಅಂಕಗಳನ್ನು ಪಡೆದುಕೊಂಡಿದ್ದಾನೆ. 

152 ವಿದ್ಯಾರ್ಥಿಗಳಲ್ಲಿ ಇಬ್ಬರು ಉನ್ನತ ಶ್ರೇಣಿಯಲ್ಲಿ, 63 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ 40 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು ಶೇ.79.60 ಫಲಿತಾಂಶ ದಾಖಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ವಿದ್ಯಾರ್ಥಿಗಳ ಸಾಧನೆಗೆ ಉಪನ್ಯಾಸಕ ವರ್ಗ ಸೇರಿದಂತೆ ಸಂಸ್ಥೆಯ ಆಡಳಿತ ಮಂಡಳಿ ಅಭಿನಂದಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News