×
Ad

ನಿರ್ಬಂಧದ ನಡುವೆ ಚಾಮುಂಡಿ ಬೆಟ್ಟ ಹತ್ತಿ ಶ್ರೀಚಾಮುಂಡೇಶ್ವರಿ ದರ್ಶನ ಪಡೆದ ಸಂಸದೆ ಶೋಭಾ ಕರಂದ್ಲಾಜೆ

Update: 2020-07-17 12:08 IST

ಮೈಸೂರು, ಜು.13: ನಿರ್ಬಂಧದ ನಡುವೆ ಆಷಾಢ ಶುಕ್ರವಾರದ ಕಡೆ ದಿನವಾದ ಇಂದು ಸಂಸದೆ ಶೋಭಾ ಕರಂದ್ಲಾಜೆ ಚಾಮುಂಡಿ ಬೆಟ್ಟ ಹತ್ತಿ  ಶ್ರೀ ಚಾಮುಂಡೇಶ್ವರಿ ದರ್ಶನ ಪಡೆದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಕೊರೋನ ಹಿನ್ನಲೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ನಿರ್ಬಂಧ ಹೇರಿ ಸಾರ್ವಜನಿಜಕರ ಪ್ರವೇಶಕ್ಕೆ ತಡೆನೀಡಲಾಗಿತ್ತು.

ಆದರೆ ಶುಕ್ರವಾರ ಬೆಳಗ್ಗೆ ಸಂಸದೆ ಶೋಭಾ ಕರಂದ್ಲಾಜೆ ಮೆಟ್ಟಿಲುಗಳನ್ನು ಹತ್ತಿ ಚಾಮುಂಡಿ ದರ್ಶನ ಪಡೆದಿದ್ದಾರೆ.

ಇದೇ ವೇಳೆ  ಸಾರ್ವಜನಿಕರು ಚಾಮುಂಡಿ ಬೆಟ್ಟ ಹತ್ತಿ ದರ್ಶನ ಪಡೆಯಲು ಮುಗಿಬಿದ್ದರು. ಆದರೆ, ಪೊಲೀಸರು ಅವರಿಗೆ ಅವಕಾಶ ನೀಡದೆ ಬರಿ ರಾಜಕಾರಣಿಗಳಿಗೆ ಅವಕಾಶ ಕಲ್ಪಿಸಿದ್ದರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ದೇವರ ದರ್ಶನ ಪಡೆಯಲು ರಾಜಕಾರಣಿಗಳಿಗೊಂದು ನ್ಯಾಯ ಸಾಮಾನ್ಯರಿಗೊಂದು ನ್ಯಾಯ ಏಕೆ ಎಂದು ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News