ರಾಜ್ಯದ ಜನತೆಯನ್ನು ರಕ್ಷಿಸುವ ಹೊಣೆ ಯಾರದು: ಡಾ.ಪುಷ್ಪಾ ಅಮರನಾಥ್ ಪ್ರಶ್ನೆ

Update: 2020-07-18 13:46 GMT

ಬೆಂಗಳೂರು, ಜು.18: ಕೊರೋನ ಸಮುದಾಯಕ್ಕೆ ಹರಡುತ್ತಿದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿಕೆ ನೀಡುತ್ತಾರೆ. ಸೋಂಕು ನಿಯಂತ್ರಣದಲ್ಲಿದೆ ಎಂದು ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ಹೇಳುತ್ತಾರೆ. ಸೋಂಕು ನಿಯಂತ್ರಣ ಸರಕಾರದಿಂದ ಸಾಧ್ಯವಿಲ್ಲ, ದೇವರೆ ಕಾಪಾಡಬೇಕೆಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳುತ್ತಾರೆ. ರಾಜ್ಯದ ಜನತೆಯನ್ನು ರಕ್ಷಿಸುವ ಹೊಣೆ ಯಾರದು? ದೇವರೇ ಗತಿ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಬಿ.ಪುಷ್ಪಾ ಅಮರನಾಥ್ ಟ್ವೀಟ್ ಮಾಡಿದ್ದಾರೆ.

ರಾಜ್ಯ ಬಿಜೆಪಿ ಸರಕಾರ ಹಗರಣದ ಮೇಲೆ ಹಗರಣ ಮಾಡುತ್ತಿದೆ. ಸ್ವಲ್ಪವೂ ನೈತಿಕತೆ ಇಲ್ಲದೆ ರಣಹದ್ದುಗಳಂತೆ ಜನರನ್ನು ಕುಕ್ಕಿ ತಿನ್ನುತ್ತಿದ್ದಾರೆ. ಉತ್ತರ ಕೊಡಿ ಬಿಜೆಪಿ ಎಂದು ಅವರು ಪ್ರಶ್ನಿಸಿದ್ದಾರೆ.

ವೆಂಟಿಲೇಟರ್ ಸಿಗದೆ ಕರ್ನಾಟಕದ ಕೊರೋನ ಸೋಂಕಿತರು ಸಾಯುತ್ತಿದ್ದಾರೆ. ಬಿಜೆಪಿ ಮಂತ್ರಿಗಳು ಪಿಪಿಇ ಕಿಟ್‍ಗಳಿಂದ ಹಿಡಿದು, ಬೆಡ್‍ಗಳ ವರೆಗೂ ಎಲ್ಲ ಕೊರೋನ ಚಿಕಿತ್ಸೆ ಸಲಕರಣೆಗಳ ಖರೀದಿ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದಾರೆ. ಬಿಜೆಪಿ ಸರಕಾರ ಕೊರೋನ ಸಂಕಷ್ಟ ಸಂದರ್ಭವನ್ನೂ ಲೂಟಿ ಮಾಡಲು ಬಳಸಿಕೊಂಡಿದೆ ಎಂದು ಪುಷ್ಪಾ ಅಮರನಾಥ್ ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News