ಸರಕಾರದಿಂದ ಎನ್.ಆರ್.ರಮೇಶ್ ಮೂಲಕ ಸುಳ್ಳು ಆರೋಪ: ಸಿದ್ದರಾಮಯ್ಯ
Update: 2020-07-18 19:21 IST
ಬೆಂಗಳೂರು, ಜು.18: ಕೊರೋನ ಸಂಬಂಧಿತ ಭ್ರಷ್ಟಾಚಾರದ ಆರೋಪಕ್ಕೆ ದಾಖಲೆ ಸಹಿತ ಉತ್ತರಿಸಲಾಗದ ರಾಜ್ಯ ಬಿಜೆಪಿ ಸರಕಾರ, ಎನ್.ಆರ್.ರಮೇಶ್ ಮೂಲಕ ಸುಳ್ಳು ಆರೋಪಗಳನ್ನು ಮಾಡಿಸುತ್ತಿದೆ. ಈ ವ್ಯಕ್ತಿ ಮಾಡಿರುವ ಎಲ್ಲ ಆರೋಪಗಳನ್ನು ಲೋಕಾಯುಕ್ತ ಮತ್ತು ಎಸಿಬಿ ತನಿಖೆ ನಡೆಸಿ ತಿರಸ್ಕರಿಸಿದೆ. ಈ ರೀತಿ ನಮ್ಮ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.