ಫ್ರಾನ್ಸ್ ನ 15ನೇ ಶತಮಾನದ ಕೆಥೆಡ್ರಲ್ ನಲ್ಲಿ ಭೀಕರ ಅಗ್ನಿ ದುರಂತ

Update: 2020-07-18 17:49 GMT

ರೆನೆಸ್(ಫ್ರಾನ್ಸ್), ಜು.15: ಪಶ್ಚಿಮ ಫ್ರಾನ್ಸ್ ನ ನಗರವಾದ ನ್ಯಾಂಟೆಸ್ನಲ್ಲಿನಲ್ಲಿ 15ನೇ ಶತಮಾನದ ಪುರಾತನ ಕೆಥೆಡ್ರಲ್ ಒಂದರಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದೆ. ಆದಾಗ್ಯೂ, ಆಕಸ್ಮಿಕ ಸಂಭವಿಸಿದ ಕೆಲವೇ ತಾಸುಗಳೊಳಗೆ ಅಗ್ನಿಶಾಮಕದಳವು ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ.

ಬೆಂಕಿ ಅನಾಹುತದಲ್ಲಿ ಕೆಥೆಡ್ರಲ್ ನಲ್ಲಿದ್ದ 400 ವರ್ಷಗಳಷ್ಟು ಹಳೆಯದಾದ ಆರ್ಗಾನ್ ವಾದನವು ಸಂಪೂರ್ಣವಾಗಿ ಸುಟ್ಟುಕರಕಲಾಗಿದೆ. ಸ್ಥಳೀಯ ಕಾಲಮಾನ ಶನಿವಾರ 8:00 ಗಂಟೆಯ ವೇಳೆಗೆ ನ್ಯಾಂಟೆಸ್ನ ಸೈಂಟ್ ಪೀಟರ್ ಹಾಗೂ ಸೈಂಟ್ ಪೌಲ್ ಕೆಥೆಡ್ರಲ್ ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. 100ಕ್ಕೂ ಅಧಿಕ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿ ಬೆಂಕಿ ನಿಯಂತ್ರಿಸುವಲ್ಲಿ ಸಫಲರಾದರು.
1972ರಲ್ಲಿಯೂ ಇದೇ ಕೆಥೆಡ್ರಲ್ನಲ್ಲಿ ಅಗ್ನಿ ಅನಾಹುತ ಸಂಭವಿಸಿತ್ತು. ಬೆಂಕಿಯಿಂದ ಹಾನಿಗೀಡಾದ ಕೆಥೆಡ್ರಲ್ ಛಾವಣಿಯನ್ನು ಸರಿಪಡಿಸಲು 13 ವರ್ಷಗಳು ತಗಲಿತ್ತು.
  ಕಳೆದ ವರ್ಷದ ಎಪ್ರಿಲ್ ನಲ್ಲಿ ಪ್ಯಾರಿಸ್ನ 13ನೇ ಶತಮಾನದ ವಿಶ್ವವಿಖ್ಯಾತ ನೊಟ್ರೆ ಡೇಮ್ ಕೆಥೆಡ್ರಲ್ ನಲ್ಲಿ ಸಂಭವಿಸಿದ ಭೀಕರ ಅಗ್ನಿ ಆಕಸ್ಮಿಕ ಸಂಭವಿಸಿತ್ತು. ಈ ದುರಂತದಲ್ಲಿ ಕೆಥೆಡ್ರಲ್ ನ ಭವ್ಯವಾದ ಗೋಪುರ ಕುಸಿದುಬಿದ್ದು, ಅದರಲ್ಲಿದ್ದ ವಿಷಕಾರಿಯಾದ ಸೀಸದ ಅಂಶವನ್ನೊಳಗೊಂಡ ಹೊಗೆಯು ಭಾರೀ ಪ್ರಮಾಣದಲ್ಲಿ ಹೊರಹೊಮ್ಮಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News