×
Ad

ರಾಜ್ಯದ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಡಿಸೆಂಬರ್ ವರೆಗೆ ದೂರದರ್ಶನದಲ್ಲಿ ಪಾಠ

Update: 2020-07-19 00:03 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.18: ಕೋವಿಡ್-19 ಹಿನ್ನೆಲೆಯಲ್ಲಿ 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಜುಲೈನಿಂದ ಡಿಸೆಂಬರ್ ವರೆಗೆ ದೂರದರ್ಶನ ಚಂದನ ವಾಹಿನಿಯಲ್ಲಿ ಪಾಠಗಳನ್ನು ಪ್ರಸಾರ ಮಾಡುವ ಯೋಜನೆಗೆ ರಾಜ್ಯ ಸರಕಾರ ಅನುಮೋದನೆ ನೀಡಿದೆ.

ಪಾಠಗಳನ್ನು ನೋಡಲು ಟಿವಿ ವ್ಯವಸ್ಥೆಯಿಲ್ಲದ ವಿದ್ಯಾರ್ಥಿಗಳನ್ನು ಟಿವಿ ಇರುವ ವಿದ್ಯಾರ್ಥಿಗಳೊಂದಿಗೆ ಅನುಮತಿ ಪಡೆದು ಸಂಯೋಜಿಸಲು ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಜವಾಬ್ದಾರಿ ನೀಡಲಾಗಿದೆ. ಇದಕ್ಕಾಗಿ 20ಮಕ್ಕಳಿಗೆ ಒಬ್ಬ ಶಿಕ್ಷಕರನ್ನು ನೇಮಿಸಲಾಗಿದೆ. ಹಾಗೂ ತಿಂಗಳಿಗೊಮ್ಮೆ ಕಿರು ಪರೀಕ್ಷೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸರಕಾರದ ಆದೇಶದಲ್ಲಿ ತಿಳಿಸಲಾಗಿದೆ.

ಒಟ್ಟು 120 ದಿನದ ಕಾರ್ಯಕ್ರಮ ಪ್ರಸಾರಕ್ಕೆ ರಾಜ್ಯ ಸರಕಾರ ದೂರದರ್ಶನಕ್ಕೆ 1.17ಕೋಟಿ ರೂ.ಪಾವತಿಸಬೇಕು. ಹಾಗೂ ಸಂಪನ್ಮೂಲ ಶಿಕ್ಷಕರ ದಿನ ಭತ್ಯೆ, ಪ್ರಯಾಣ ಭತ್ಯೆ, ಸಂಭಾವನೆ ಭತ್ಯೆ ಸೇರಿ ಒಟ್ಟು 19.20ಲಕ್ಷ ರೂ. ನೀಡಬೇಕಾಗುತ್ತದೆ. ಜತೆಗೆ ತಾಂತ್ರಿಕ ತಂಡದವರಿಗೆ, ಸ್ಟುಡಿಯೋದ ಹೆಚ್ಚುವರಿ ಉಪಕರಣಗಳ ಖರೀದಿಗೆ, ಎರಡು ವಾಹನಗಳ ಲಾಜಿಸ್ಟಿಕ್ಸ್‍ಗೆ ಹಾಗೂ ಇತರೆ ವೆಚ್ಚಕ್ಕೆ ಅಗತ್ಯವಿರುವಷ್ಟು ಹಣ ನೀಡುವ ಕ್ರಿಯಾ ಯೋಜನೆಗೆ ಸರಕಾರ ಒಪ್ಪಿಗೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News