ಸಿಡಿಲು ಬಡಿದು ಯುವಕ ಮೃತ್ಯು
Update: 2020-07-19 16:42 IST
ಹನೂರು, ಜು.19: ಸಿಡಿಲು ಬಡಿದು ಯುವಕನೋರ್ವ ಮೃತಪಟ್ಟಿರುವ ಘಟನೆ ತಾಲೂಕಿನ ಮಲೆಮಹದೇಶ್ವರ ಬೆಟ್ಟ ಸಮೀಪದ ದೊಡ್ಡಾಣೆ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ .
ದೊಡ್ಡಾಣೆ ಗ್ರಾಮದ ಮಹದೇವಸ್ವಾಮಿ (19) ಮೃತ ಯುವಕ. ಗ್ರಾಮದ ಹೊರವಲಯದ ಜಮೀನಿನಲ್ಲಿ ಕೆಲಸ ಮಾಡುತಿದ್ದ ಎನ್ನಲಾಗಿದೆ.
ಶನಿವಾರ ಸಂಜೆ ಭಾರೀ ಮಳೆಯ ಜೊತೆ ಗುಡುಗು ಸಿಡಿಲು ಬಡಿದಿದ್ದು, ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಸಂಬಂಧ ಮೃತನ ಸಂಬಂಧಿಗಳು ಠಾಣೆಗೆ ಮಾಹಿತಿ ನೀಡಿದ್ದಾರೆ.