ಜಿಮ್ಸ್ ಆಸ್ಪತ್ರೆಯ ಸುತ್ತಮುತ್ತಲಿನ ಹಂದಿಗಳ ಸ್ಥಳಾಂತರ: ಸಚಿವ ಶ್ರೀರಾಮುಲು

Update: 2020-07-19 13:27 GMT

ಬೆಂಗಳೂರು, ಜು.19: ಇಂದು ಮಾಧ್ಯಮದಲ್ಲಿ ವರದಿಯಾದ, ಜಿಮ್ಸ್ ಆಸ್ಪತ್ರೆಯಲ್ಲಿ ಹಂದಿಗಳು ಕಾಣಿಸಿಕೊಂಡ ಪ್ರಕರಣ ಕಳೆದ ಮೂರು ದಿನಗಳ ಹಿಂದೆ ನಡೆದಿದೆ. ಈ ಕುರಿತು ಮಾಹಿತಿ ಬಂದ ತಕ್ಷಣ, ಕೂಡಲೇ ಕ್ರಮ ಕೈಗೊಳ್ಳುವಂತೆ ಆಸ್ಪತ್ರೆಯ ಆಡಳಿತ ಮಂಡಳಿಗೆ ಸೂಚಿಸಲಾಗಿತ್ತು. ಅದರಂತೆ ಹಂದಿಗಳ ಮಾಲಕರನ್ನು ಕರೆಸಿ, ಆಸ್ಪತ್ರೆ ಸುತ್ತಮುತ್ತಲಿನ ಎಲ್ಲ ಹಂದಿಗಳನ್ನು ಸೆರೆ ಹಿಡಿದು ಸ್ಥಳಾಂತರಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.

ಹಾಗೆಯೇ ಮತ್ತೊಮ್ಮೆ ಈ ರೀತಿ ನಡೆಯದ ಹಾಗೆ ಎಚ್ಚರ ವಹಿಸುವಂತೆ ಜಿಲ್ಲಾಡಳಿತ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News