ಮಾಸ್ಕ್ ಧರಿಸಿ ಕಿರಾಣಿ ಅಂಗಡಿ ಲೂಟಿ: ಸಿಸಿಟಿವಿಯಲ್ಲಿ ಕೃತ್ಯ ಸೆರೆ

Update: 2020-07-20 07:13 GMT

ಕಲಬುರಗಿ, ಜು.20: ಕೊರೋನ ಹಿನ್ನೆಲೆ ಜಿಲ್ಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದು, ಈ ಮದ್ಯೆ ಕೆಲ ಮಾಸ್ಕ್ ಧಾರಿ ಕಳ್ಳರು ನಿನ್ನೆ ರಾತ್ರಿ ಹೋಲ್ ಸೇಲ್ ಕಿರಾಣಿ ಅಂಗಡಿಯೊಂದನ್ನು ಲೂಟಿ ಮಾಡಿ ತಮ್ಮ ಕೈಚಳಕ ತೊರಿಸಿದ್ದಾರೆ. ಈ ಕೃತ್ಯ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ನಗರದ ಮಿಸಬಾ ನಗರದ ಗುಲಬರ್ಗಾ ಹುಸೇನ್ ಐಕಾನ್ ಕಾಂಪ್ಲೆಕ್ಸ್ ನ ಅಂಗಡಿಯೊಂದರ ನಿನ್ನೆ ರಾತ್ರಿ ವೇಳೆ ಮುಸುಕು ಧಾರಿಗಳು ಅಂಗಡಿಯ ಶಟರ್ ಮುರಿದು, ಕೌಂಟರ್ ನಲ್ಲಿದ್ದ 80 ಸಾವಿರ ನಗದು ಮತ್ತು 50 ಸಾವಿರ ರೂ. ಮೌಲ್ಯದ ಸಾಮಾಗ್ರಿಗಳನ್ನು ದೋಚಿ ಪರಾರಿಯಾಗಿದ್ದಾರೆ. 

ಜಿಲ್ಲೆಯಲ್ಲಿ ಅಂಗಡಿಗಳ ಲೂಟಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ಲಾಕ್ ಡೌನ್ ಸಮಯದಲ್ಲಿ ಅಂಗಡಿಗಳಿಗೆ ಸೂಕ್ತ ಭದ್ರತೆ ಇಲ್ಲದೆ ಆತಂಕಪಡುವ ಸ್ಥಿತಿ ಇದೆ ಎಂದು ಅಂಗಡಿ ಮಾಲಕರೊಬ್ಬರು ತಮ್ಮ ಅಳಲು ತೊಡಿಕೊಂಡಿದ್ದಾರೆ. 

ಘಟನಾ ಸ್ಥಳಕ್ಕೆ ರಾಘವೇಂದ್ರ ನಗರ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News