ಎಸ್ಸೆಸ್ಸೆಫ್ DEAN-20 ಆನ್ ಲೈನ್ ತರಬೇತಿ ಕಾರ್ಯಾಗಾರಕ್ಕೆ ಚಾಲನೆ
ಮಂಗಳೂರು, ಜು.20: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯು ಜಿಲ್ಲೆ ಮತ್ತು ಝೋನ್ ಘಟಕ ಗಳ ಕಾರ್ಯಕಾರಿ ಸಮಿತಿ ಸದಸ್ಯರಿಗಾಗಿ ಹಮ್ಮಿಕೊಂಡ DEAN-20 ಆನ್ ಲೈನ್ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಲಾಯಿತು.
ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಉಮರ್ ಅಸ್ಸಖಾಫ್ ಮದನಿ ಅವರು ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದ ಆಯೋಜಿಸಲಾಗಿದ್ದ ಮರ್ಹೂಂ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದರ ಅನುಸ್ಮರಣಾ ಸಂಗಮದಲ್ಲಿ ಉಸ್ತಾದರ ಪುತ್ರ ಅಲ್ ಮದೀನ ಜನರಲ್ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಅನುಸ್ಮರಣಾ ಭಾಷಣ ಮಾಡಿದರು. ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಕೆ.ಎಂ ಮುಸ್ತಫಾ ನಈಮಿ ಡೀನ್ ಕುರಿತು ಸಮಗ್ರ ಮಾಹಿತಿ ನೀಡಿದರು.
ತರಬೇತಿ ಕಾರ್ಯಾಗಾರದ ಮೊದಲ ತರಗತಿಯನ್ನು ಎಸ್ಸೆಸ್ಸೆಫ್ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಡಾಕ್ಟರ್ ಫಾರೂಕ್ ನಈಮಿ ಕೊಲ್ಲಂ ನಡೆಸಿದರು. ನಿಕಟಪೂರ್ವ ಕಾರ್ಯದರ್ಶಿ ಕೆ.ಎಂ ಅಬೂಬಕರ್ ಸಿದ್ದಿಕ್, ಎಸ್.ವೈ ಎಸ್ ಉಪಾಧ್ಯಕ್ಷ ಜಿಎಂ ಕಾಮಿಲ್ ಸಖಾಫಿ, ಕೇರಳ ಎಸ್ಸೆಸ್ಸೆಫ್ ಮಾಜಿ ಕಾರ್ಯದರ್ಶಿಗಳಾದ ಮಜೀದ್ ಅರಿಯಲ್ಲೂರು, ಕಲಾಂ ಮಾವೂರು ಮುಂತಾದ ಪ್ರಮುಖರು ತರಬೇತಿ ನಡೆಸಲಿದ್ದಾರೆ.
ಜುಲೈ 26 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಕೂಟಂಬಾರ ಅಬ್ದುರಹ್ಮಾನ್ ದಾರಿಮಿ ತರಗತಿ ನಡೆಸಲಿದ್ದು, ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿಯಾದ ಶಾಫಿ ಸಅದಿ ಬೆಂಗಳೂರು, ಎಸ್ ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎಮ್.ಎಸ್.ಎಂ ಝೈನಿ ಕಾಮಿಲ್ ಸಖಾಫಿ, ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಮಾಜಿ ಕಾರ್ಯದರ್ಶಿಗಳಾದ ಅಬ್ದುಲ್ ಹಮೀದ್ ಬಜ್ಪೆ, ಸ್ವಾದಿಕ್ ಮಲೆಬೆಟ್ಟು ಸೇರಿ ಹಲವು ನಾಯಕರು ಭಾಗವಹಿಸಲಿದ್ದಾರೆಂದು ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.