×
Ad

ವಿದ್ಯುತ್ ಕಂಬದಲ್ಲೇ ಹಾರಿಹೋಯ್ತು ಗುತ್ತಿಗೆ ಕಾರ್ಮಿಕನ ಪ್ರಾಣ

Update: 2020-07-21 23:54 IST

ಶಿವಮೊಗ್ಗ, ಜು.21: ವಿದ್ಯುತ್ ಕಂಬವೇರಿ ಕಾರ್ಯನಿರ್ವಹಿಸುತ್ತಿದ್ದಾಗ ಗುತ್ತಿಗೆ ಕಾರ್ಮಿಕನೋರ್ವ ಕರೆಂಟ್ ಶಾಕ್‌ನಿಂದ ಸಾವನ್ನಪ್ಪಿರುವ ಘಟನೆ ಸಾಗರದಲ್ಲಿ ನಡೆದಿದೆ.

ಪಟ್ಟಣದ ಕೈಗಾರಿಕಾ ವಲಯದಲ್ಲಿ ಕಾರ್ಯನಿರ್ವಹಿಸುವಾಗ ಕಿರಣ್(27) ಎಂಬಾತ ಸಾವನ್ನಪ್ಪಿದ್ದಾನೆ. ಈತ ಸಾಗರ ತಾಲೂಕು ನಿಚಡಿ ಗ್ರಾಮದ ನಿವಾಸಿಯಾಗಿದ್ದು, ಗುತ್ತಿಗೆ ಕಾರ್ಮಿಕನಾಗಿ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ.

ಸಾಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News