'ಶೀಘ್ರ ಕೊರೋನ ವರದಿ ನೀಡಿ, ಇಲ್ಲದಿದ್ದರೆ ಪರೀಕ್ಷೆ ಮಾಡಬೇಡಿ': ಜಿಲ್ಲಾಡಳಿತದ ವಿರುದ್ಧ ಕಳಸದ ಜನತೆ ಅಭಿಯಾನ

Update: 2020-07-23 08:32 GMT
ಸಾಂದರ್ಭಿಕ ಚಿತ್ರ

ಚಿಕ್ಕಮಗಳೂರು, ಜು.23: ಗಂಟಲ ದ್ರವ ನೀಡಿ 15 ದಿನಗಳಾದರೂ ಕೊರೋನ ವರದಿ ಬಂದಿಲ್ಲ ಎಂದು ಆರೋಪಿಸಿರುವ ಕಳಸದ ಜನತೆ ಜಿಲ್ಲಾಡಳಿತದ ವಿರುದ್ಧ ಅಸಹಕಾರ ಚಳವಳಿ ನಡೆಸಲು ನಿರ್ಧರಿಸಿದ್ದು, ಕೊರೋನ ಪರೀಕ್ಷೆ ಮಾಡಿಸುವುದಿಲ್ಲ ಎಂದು ಅಭಿಯಾನ ಕೈಗೊಂಡಿದ್ದಾರೆ. 

ಕೊರೋನ ಪರೀಕ್ಷೆಗಾಗಿ ಗಂಟಲ ದ್ರವ ನೀಡಿ ಸುಮಾರು 15 ದಿನಗಳಾದರೂ ವರದಿ ಬರುತ್ತಿಲ್ಲ ಎಂದು ಜನತೆ ಆರೋಪಿಸಿದ್ದು, ಹೀಗಾಗಿ ಮೂಡಿಗೆರೆ ತಾಲೂಕಿನ ಕಳಸ ನಿವಾಸಿಗಳು ಸಾಮಾಜಿಕ ಜಾಲತಾಣದ ಮೂಲಕ ಜಿಲ್ಲಾಡಳಿತದ ವಿರುದ್ಧ ಅಭಿಯಾನ ಕೈಗೊಂಡಿದ್ದಾರೆ. 

ವರದಿ ಬರಲು ವಿಳಂಬವಾದಲ್ಲಿ ಸೋಂಕು ಖಚಿತ ಎಂಬಂಥ ಪರಿಸ್ಥಿತಿ ಇದೆ. ಹೀಗಾಗಿ ಕಳಸದಲ್ಲಿ ಯಾರೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಡಿ. 2 ದಿನದಲ್ಲಿ ವರದಿ ನೀಡುವ ಭರವಸೆ ನೀಡಿದರೆ ಮಾತ್ರ ಟೆಸ್ಟ್ ಮಾಡಿಸಿ. ಇಲ್ಲದಿದ್ದರೆ ಟೆಸ್ಟ್ ಮಾಡಿಸಿಕೊಳ್ಳುವುದು ಬೇಡ ಎನ್ನುವ ಅಭಿಯಾನ ಆರಂಭಿಸಲಾಗಿದೆ. ಈ ಮೂಲಕ ಶೀಘ್ರವೇ ವರದಿ ನೀಡಲು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News