×
Ad

ಕಲಬುರಗಿಯಲ್ಲಿ ವೆಂಟಿಲೇಟರ್ ಕೊರತೆಯಿಂದ ಶಿಕ್ಷಕ ಸಾವು: ಕುಟುಂಬಸ್ಥರ ಆರೋಪ

Update: 2020-07-23 15:46 IST

ಕಲಬುರಗಿ, ಜು.23: ಜಿಲ್ಲೆಯಲ್ಲಿ ವೆಂಟಿಲೇಟರ್ ಕೊರತೆಯಿಂದ ಅಂಗನವಾಡಿ ಕಾರ್ಯಕರ್ತೆ ಓರ್ವರು ಮೃತಪಟ್ಟ ಬೆನ್ನಲ್ಲೇ, ಈಗ ಮತ್ತೊಬ್ಬರು ವೆಂಟಿಲೇಟರ್ ಕೊರತೆಯಿಂದ ಮೃತಪಟ್ಟಿರುವ ಅರೋಪ ಕೇಳಿ ಬರುತ್ತಿದೆ. 

ಅಫಜಲಪುರ ಪಟ್ಟಣದ ಶಿಕ್ಷಕ ಬಸವರಾಜ ಪದಕಿ ಎಂಬವರು ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸಮಸ್ಯೆಯಿಂದಾಗಿ ಮೃತಪಟ್ಟಿದ್ದಾರೆ ಎಂಬ ಆರೋಪವನ್ನು ಕುಟುಂಬಸ್ಥರು ಮಾಡಿದ್ದಾರೆ.

ಮೃತರ ಗಂಟಲು ದ್ರವ ಕೋವಿಡ್ ಪರೀಕ್ಷೆಗೆ ಕಳುಹಿಸಲಾಗಿದೆ. ಇದಲ್ಲದೇ ನಿನ್ನೆ ಜಿಮ್ಸ್ ಆಸ್ಪತ್ರೆಯಲ್ಲಿ ನಿಧನರಾದ ವೃದ್ಧೆಯ ಸಾವಿಗೂ ವೆಂಟಿಲೇಟರ್​ ಕೊರತೆಯೇ ಕಾರಣ ಎಂದು ಅವರ ಮಗ ದೂರಿದ್ದು, ಶಾಸಕ ಪ್ರಿಯಾಂಕ್ ಖರ್ಗೆ ಕೂಡಾ ಈ ಬಗ್ಗೆ ಟ್ವೀಟ್​ ಮಾಡಿ ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ‌. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News