ಬ್ರಹ್ಮಾವರ: ಕೊರೋನ ಸೋಂಕಿಗೆ ಮಹಿಳೆ ಬಲಿ

Update: 2020-07-23 14:45 GMT

ಉಡುಪಿ, ಜು.23: ಚಾಂತಾರು ಅಗ್ರಹಾರದ 70 ವರ್ಷ ಪ್ರಾಯದ ಮಹಿಳೆಯೊಬ್ಬರು ಬುಧವಾರ ರಾತ್ರಿ ಕೊರೋನ ಸೋಂಕಿಗೆ ಬಲಿಯಾಗಿದ್ದಾರೆ.

ಕಳೆದ ಎರಡು-ಮೂರು ವರ್ಷಗಳಿಂದ ಅಸ್ತಮಾದೊಂದಿಗೆ ಆಗಾಗ ಶೀತ-ಜ್ವರದಿಂದ ಬಳಲುತಿದ್ದ ಈ ಮಹಿಳೆಯ ಗಂಟಲು ದ್ರವ ಮಾದರಿ ಪರೀಕ್ಷೆ ನಿನ್ನೆ ರಾತ್ರಿಯಷ್ಟೇ ಪಾಸಿಟಿವ್ ಬಂದಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲು ಸಿದ್ಧತೆಗಳು ನಡೆಯುತಿದ್ದಂತೆ 9:00 ಗಂಟೆ ಸುಮಾರಿಗೆ ಮನೆಯಲ್ಲೇ ಮೃತಪಟ್ಟರು ಎಂದು ತಿಳಿದುಬಂದಿದೆ.

ಪಿಎಫ್‌ಐ ಸಹಕಾರ: ಮದುವೆಯಾದ ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿರುವ ಮೃತ ಮಹಿಳೆನ್ನು ಮುಟ್ಟಲು ಕುಟುಂಬಿಕರಾರೂ ಮುಂದೆ ಬರದಾಗ, ಆರೋಗ್ಯ ಇಲಾಖೆಯ ಡಾ.ಪ್ರೇಮಾನಂದ ಅವರ ಕೋರಿಕೆಯ ಮೇರೆಗೆ ಉಡುಪಿಯ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ವೈದ್ಯಕೀಯ ಉಸ್ತುವಾರಿ ಮುನೀರ್ ಕಲ್ಮಾಡಿ ಇವರ ನೇತೃತ್ವದ ಸಂಘಟನೆಯ ತರುಣರು ಪಿಪಿಇ ಕಿಟ್‌ಗಳನ್ನು ಧರಿಸಿ ಮೃತದೇಹವನ್ನು ಕೊರೋನ ಕವಚದೊಂದಿಗೆ ಅಂಬುಲೆನ್ಸ್‌ನಲ್ಲಿ ಅಜ್ಜರಕಾಡಿನ ಜಿಲ್ಲಾಸ್ಪತ್ರೆಗೆ ಸಾಗಿಸಲು ನೆರವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News