ಬಂಧಿತ ಮಹಾದೇವ್ ಸಾಹುಕಾರ್ ಗೆ ಕೊರೋನ ಪಾಸಿಟಿವ್
Update: 2020-07-23 15:58 IST
ವಿಜಯಪುರ, ಜು.23: ನಿನ್ನೆಯಷ್ಟೇ ಬಂಧಿಸಲ್ಪಟ್ಟಿದ್ದ ಭೀಮಾತೀರದ ಮಹಾದೇವ್ ಸಾಹುಕಾರ್ ಕೋವಿಡ್19 ಟೆಸ್ಟ್ ಪಾಸಿಟಿವ್ ಬಂದಿದೆ.
ಚಿನ್ನದ ವ್ಯಾಪಾರಿಗೆ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಸಾಹುಕಾರ್ ನ್ನು ಚಡಚಣ ಪೊಲೀಸರು ನಿನ್ನೆ ಬಂಧಿಸಿದ್ದರು. ಬಂಧನದ ಬಳಿಕ ಸಾಹುಕಾರ್ ನನ್ನು ಕೋವಿಡ್ ಟೆಸ್ಟ್ ಗೆ ಒಳಪಡಿಸಿದರು.
ಇಂದು ಬೆಳಗ್ಗೆ ಬಂದ ವರದಿಯಲ್ಲಿ ಸಾಹುಕಾರ್ ಗೆ ಕೊರೋನ ಪಾಸಿಟಿವ್ ಬಂದಿದೆ. ಹೀಗಾಗಿ ವಿಜಯಪುರದ ದರ್ಗಾ ಜೈಲಿನಲ್ಲಿ ಸಾಹುಕಾರ್ ಗೆ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಲಾಗಿದೆ ಎಂದು ಎಸ್ಪಿ ಅನುಪಮ್ ಅಗರವಾಲ್ ಮಾಹಿತಿ ನೀಡಿದ್ದಾರೆ.
ಅಲ್ಲದೇ, ಬಂಧನಕ್ಕೆ ತೆರಳಿದ ಚಡಚಣ ಪೊಲೀಸರಿಗೆ ಕೊರೋನ ವೈರಸ್ ತಗಲುವ ಆತಂತ ಶುರುವಾಗಿದೆ.