ಕೊರೋನ ಪಾಸಿಟಿವ್ ಸುದ್ದಿ ಕೇಳಿ ಕುಸಿದು ಬಿದ್ದು ವ್ಯಕ್ತಿ ಸಾವು

Update: 2020-07-23 17:15 GMT
ಸಾಂದರ್ಭಿಕ ಚಿತ್ರ

ಕಲಬುರಗಿ, ಜು.23: ಕೊರೋನ ವರದಿಯು ಪಾಸಿಟಿವ್ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ಕರೆ ಮಾಡಿದ ಬಳಿಕ ಆಟೊ ಚಾಲಕರೊಬ್ಬರು ಸ್ಥಳದಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.

ಇಲ್ಲಿನ ಭವಾನಿ ನಗರದ ಆಟೊ ಚಾಲಕ ಅಶೋಕ(55) ಎಂಬವರು ಮನೆಯಲ್ಲೇ ಕುಸಿದು ಬಿದ್ದು ಸಾವಿಗೀಡಾಗಿದ್ದಾರೆ ಎನ್ನಲಾಗಿದೆ. ಇತ್ತೀಚಿಗೆ ಅಶೋಕ ಅವರ ಅಳಿಯನಿಗೆ ಸೋಂಕು ತಗುಲಿತ್ತು. ಆದ್ದರಿಂದ ಜು.8ರಂದು ಕುಟುಂಬ ಸದಸ್ಯರೊಂದಿಗೆ ಅಶೋಕ ಅವರೂ ಕೊರೋನ ತಪಾಸಣೆಗೆ ಒಳಗಾಗಿದ್ದರು.

15 ದಿನಗಳ ಬಳಿಕ, ಬುಧವಾರ ಕರೆ ಮಾಡಿದ ಆರೋಗ್ಯ ಸಿಬ್ಬಂದಿಯು ಕೊರೋನ ವರದಿ ಪಾಸಿಟಿವ್ ಬಂದಿರುವುದನ್ನು ದೃಢಪಡಿಸುತ್ತಿದ್ದಂತೆಯೇ ಅಶೋಕ ಅವರು ಕುಸಿದು ಬಿದ್ದು ಅಲ್ಲೇ ಸಾವನ್ನಪ್ಪಿದ್ದಾರೆ. ಮರಣೋತ್ತರವಾಗಿ ಕೊರೋನ ಪರೀಕ್ಷೆ ನಡೆಸಿದಾಗ ಅಶೋಕ ಅವರಿಗೆ ವರದಿ ನೆಗೆಟಿವ್ ಬಂದಿದೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News