×
Ad

ರೌಡಿ ಶೀಟರ್ ಕೊಲೆ ಅರೋಪಿಗಳ ಸೆರೆ: ಓರ್ವನ ಮೇಲೆ ಪೊಲೀಸರಿಂದ ಶೂಟ್ ಔಟ್

Update: 2020-07-23 23:21 IST

ಚಿಕ್ಕಬಳ್ಳಾಪುರ, ಜು.23: ಬುಧವಾರ ರೌಡಿ ಶೀಟರ್ ಅಟೋ ರಮೇಶ್‍ನನ್ನು ಗೌರಿಬಿದನೂರು ತಾಲೂಕಿನ ಕಾದಲವೇಣಿ ಮನೆಯಲ್ಲಿ ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಅರೋಪಿಗಳನ್ನು ಗ್ರಾಮಾಂತರ ಪೊಲೀಸರು ಸಿನೀಮಿಯ ರೀತಿಯಲ್ಲಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಅಟೋ ರಮೇಶ್ ಕೊಲೆಯಾಗುತ್ತಿದ್ದಂತೆ ಸ್ಥಳಕ್ಕೆ ಎಸ್ಪಿ ಮಿಥುನ್ ಕುಮಾರ್ ಅಗಮಿಸಿ ಪರಿಶೀಲನೆ ಮಾಡಿ ರಾತ್ರೋರಾತ್ರಿ ನಾಲ್ಕು ತಂಡಗಳನ್ನು ರಚಿಸಿದ್ದರು.

ಕೊಲೆ ಅರೋಪಿಗಳು ಹಳೇ ಉಪ್ಪಾರಹಳ್ಳಿ ಅರಣ್ಯದಲ್ಲಿ ಅವಿತುಕೊಂಡಿದ್ದು, ಇದರ ಮಾಹಿತಿ ಅರಿತ ಪೊಲೀಸರು ನಾಲ್ಕೂ ಮಂದಿಯನ್ನು ಹಿಡಿಯಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಅರೋಪಿ ಅಂಬರೀಶ್ ಪೊಲೀಸರ ಮೇಲೆ ಹಲ್ಲೆ ಮಾಡುವುದಕ್ಕೆ ಮುಂದಾಗಿದ್ದು, ಈ ವೇಳೆ ಗ್ರಾಮಾಂತರ ಪಿಎಸ್ಸೈ ಮೋಹನ್ ಅರೋಪಿ ಅಂಬರೀಶ್ ಬಲ ಕಾಲಿಗೆ ಶೂಟ್ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ಪೊಲೀಸ್ ಕಾನ್‍ಸ್ಟೇಬಲ್ ಮಧುಸೂದನ್ ಅವರ ತಲೆ ಮತ್ತು ಕೈಗಳಿಗೆ ಗಂಭೀರವಾದ ಗಾಯಗಳು ಅಗಿದ್ದು, ನಗರದ ಸಾರ್ವಜನಿಕ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅರೋಪಿಗಳಾದ ಕಾಚಮಾಚೇನಹಳ್ಳಿಯ ವೆಂಕಟರೆಡ್ಡಿ (27) ಹೊಸೂರು ಅರ್ಜುನ್ (22) ಹಳೇ ಉಪ್ಪಾರಹಳ್ಳಿಯ ಅಂಬರೀಶ್ (27) ಮುದುಗರೆ ವೆಂಕಟೇಶ್(21) ಬಂಧಿಸಿ, ತನಿಖೆ ಮುಂದುವರಿಸಿದ್ದಾರೆ.

ಬಾಗೇಪಲ್ಲಿ ವೃತ್ತ ನಿರೀಕ್ಷಕ ನಯಾಜ್ ಬೇಗ್, ಗ್ರಾಮಾಂತರ ಪಿಸ್ಸೈ ಮೋಹನ್, ನಗರ ಠಾಣೆ ಪಿಎಸ್ಸೈ ಅವಿನಾಶ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News