×
Ad

ಕೊರೋನ ಸೋಂಕು ದೃಢಪಟ್ಟ ಮೂವರು ನಾಪತ್ತೆ

Update: 2020-07-24 23:49 IST
ಸಾಂದರ್ಭಿಕ ಚಿತ್ರ

ಮೈಸೂರು,ಜು.24: ಕೊರೋನ ಪಾಸಿಟಿವ್ ಬಂದ ಮೂವರು ವ್ಯಕ್ತಿಗಳು ನಾಪತ್ತೆಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಅಗ್ರಹಾರದ ರಾಮಾನುಜ ರಸ್ತೆ ಅಡ್ರೆಸ್ ಕೊಟ್ಟಿರುವ ಮೂವರು ಸೋಂಕಿತ ವ್ಯಕ್ತಿಗಳು ನಾಪತ್ತೆಯಾಗಿದ್ದಾರೆ. ಈ ಕುರಿತು ಸ್ಥಳಿಯ ಕಾರ್ಪೋರೇಟರ್ ಬಿ.ವಿ. ಮಂಜುನಾಥ್ ಮಾಹಿತಿ ನೀಡಿದ್ದಾರೆ. ಸೋಂಕಿತ ಮೂವರು ವ್ಯಕ್ತಿಗಳು ನಾಪತ್ತೆಯಾಗಿದ್ದು, ಕಳೆದ ನಾಲ್ಕೈದು ದಿನಗಳಿಂದ ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ಸೋಂಕಿತ ವ್ಯಕ್ತಿಗಳು ಇತ್ತ ಮನೆ ಅಡ್ರೆಸ್ ಕೂಡ ತಪ್ಪಾಗಿ ನೀಡಿದ್ದಾರೆ. ನಾಪತ್ತೆಯಾಗಿರುವ ಮೂವರು ಇನ್ನೆಷ್ಟು ಜನರಿಗೆ ಕೊರೋನ ಹರಡುತ್ತಾರೆ ಎಂಬ ಆತಂಕ ಜನತೆಯಲ್ಲಿ ಶುರುವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News