ದಾವಣಗೆರೆ: ಚಿಕಿತ್ಸೆ ನಿರಾಕರಿಸಿದ ಆಸ್ಪತ್ರೆಗಳು; ಪೌರ ಕಾರ್ಮಿಕ ಸಾವು

Update: 2020-07-26 16:22 GMT

ದಾವಣಗೆರೆ, ಜು.25: ಚಿಕಿತ್ಸೆಗಾಗಿ ಪೌರ ಕಾರ್ಮಿಕನೋರ್ವ (ಮ್ಯಾನ್ಯುವಲ್ ಸ್ಕಾವೆಂಜರ್) ಹಲವು ಆಸ್ಪತ್ರೆಗಳಿಗೆ ತೆರಳಿದರೂ ಸೂಕ್ತ ಕಾಲಕ್ಕೆ ಚಿಕಿತ್ಸೆ ಸಿಗದೆ ಮೃತಪಟ್ಟಿರುವ ಘಟನೆ ರವಿವಾರ ನಡೆದಿದೆ. 

ಇಲ್ಲಿನ ಗಾಂಧಿನಗರದ ನಿವಾಸಿ ಕುಮಾರ್ (35) ಸಾವನ್ನಪ್ಪಿದ ಪೌರ ಕಾರ್ಮಿಕ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಕುಮಾರ ರವಿವಾರ ಬೆಳಗ್ಗೆಯಿಂದ ಚಿಕಿತ್ಸೆಗಾಗಿ ನಗರದ ವಿವಿಧ ಆಸ್ಪತ್ರೆಗಳಿಗೆ ಸುತ್ತಾಡಿದರು. ಆದರೆ ಎಲ್ಲಿಯೂ ಚಿಕಿತ್ಸೆ ಸಿಕ್ಕಿಲ್ಲ ಎನ್ನಲಾಗಿದೆ.

ಕೋವಿಡ್ ಟೆಸ್ಟ್ ಮಾಡಿಸಿಕೊಂಡು ಬರಬೇಕು ಎಂದು ಚಿಕಿತ್ಸೆ ನೀಡಿಲ್ಲ. ಕೊನೆಗೆ ಜಿಲ್ಲಾ ಆಸ್ಪತ್ರೆಗೆ ಹೋಗಿದ್ದಾರೆ. ಅಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಕೋವಿಡ್ ಟೆಸ್ಟ್ ಮಾಡಿಸಿದಾಗ ವರದಿ ನೆಗೆಟವ್ ಬಂದಿದೆ ಎಂದು ತಿಳಿದುಬಂದಿದೆ.

ಚಿಕಿತ್ಸೆ ನಿರಾಕರಿಸುವ ಆಸ್ಪತ್ರೆಗಳ ವಿರುದ್ದ ಕ್ರಮ
ಈಗಾಲೇ ಖಾಸಗಿ ಆಸ್ಪತ್ರೆಗಳು ಶೇ.50 ರಷ್ಟು ಬೆಡ್ ಬಿಟ್ಟುಕೊಡಲು ಒಪ್ಪಿದ್ದಾರೆ. ಮೃತಪಟ್ಟಿರುವ ವ್ಯಕ್ತಿ ಬೇರೆ ಬೇರೆ ಆಸ್ಪತ್ರೆಗಳಿಗೆ ಹೋಗಿ ನಂತರ ಜಿಲ್ಲಾ ಆಸ್ಪತ್ರೆಗೆ ಸೇರ್ಪಡೆ ಆಗಿದ್ದಾರೆ. ಎಲ್ಲ ಸೌಲಭ್ಯಗಳು ಇದ್ದು  ಚಿಕಿತ್ಸೆ ನಿರಾಕರಿಸಿದರೆ ಅಂತಹ ಖಾಸಗಿ ಆಸ್ಪತ್ರೆಗಳ ವಿರುದ್ಧ ವಿಪತ್ತು ನಿರ್ವಹಣೆ ಕಾಯ್ದೆ ಅಡಿ ಕೇಸ್ ಮಾಡುತ್ತೇನೆ ಎಂದು ಎಚ್ಚರಿಸಿದರು. 

ಯಾರಿಗಾದರೂ ಚಿಕಿತ್ಸೆ ಸಿಗದೇ ಇರುವ ಬಗ್ಗೆ ಲಿಖಿತ ದೂರು ನೀಡಿದರೆ ಅವರ ದೂರು ಸಾಬೀತು ಆದರೆ ಅಗತ್ಯವಾಗಿ ಶಿಸ್ತಿನ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.

ಕಾಲಿಗೆ ನಮಸ್ಕರಿಸಲು ಮುಂದಾದ ರೋಗಿಯ ಸಂಬಂಧಿ

ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರ ಕಾಲಿಗೆ ರೋಗಿಯ ಸಂಬಂಧಿಕರು ನಮಸ್ಕರಿಸಲು ಮುಂದಾದರು. ಆಗ ಆ ವ್ಯಕ್ತಿಯ ಕಾಲಿಗೆ ಡಿಸಿಯವರು ನಾವೇ ನಿಮ್ಮ ಕಾಲಿಗೆ ಬೀಳುತ್ತೇವೆ ಎಂದು ಬೀಳಲು ಮುಂದಾದರು. ನಂತರ ಸಂಬಂಧಿಕರಿಗೆ ಸಮಾಧಾನ ಪಡಿಸಿದ ಅವರು, ಸೂಕ್ತ ಚಿಕಿತ್ಸೆ ನೀಡುವಂತೆ ಆಸ್ಪತ್ರೆಯ ಅಧೀಕ್ಷಕರಿಗೆ ಸೂಚಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News