ಚಾಮರಾಜನಗರ: ಐನೂರರ ಗಡಿ ದಾಟಿದ ಕೊರೋನ ಸೊಂಕಿತರ ಸಂಖ್ಯೆ

Update: 2020-07-26 16:40 GMT

ಚಾಮರಾಜನಗರ, ಜು.26: ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ ಐನೂರರ ಗಡಿ ದಾಟಿದೆ. ರವಿವಾರ ಜಿಲ್ಲೆಯಲ್ಲಿ 31 ಹೊಸ ಕೊರೋನ ಸೊಂಕಿತರನ್ನು ಪತ್ತೆ ಹಚ್ಚುವ ಮೂಲಕ ಜಿಲ್ಲೆಯಲ್ಲಿ ಈ ತನಕ 506 ಕೊರೋನ ಸೊಂಕಿತರನ್ನು ಗುರುತಿಸಲಾಗಿದೆ.

ರವಿವಾರ ಕೊಳ್ಳೇಗಾಲದಲ್ಲಿ 13 ಮಂದಿ, ಚಾಮರಾಜನಗರ ತಾಲೂಕಿನಲ್ಲಿ 5 ಮಂದಿ, ಹನೂರು ತಾಲೂಕಿನಲ್ಲಿ 1, ಯಳಂದೂರು ತಾಲೂಕಿನಲ್ಲಿ 3 ಮಂದಿ, ಗುಂಡ್ಲುಪೇಟೆ ತಾಲೂಕಿನಲ್ಲಿ 5 ಮಂದಿ ಸೇರಿ 11 ಮಂದಿಗೆ ಕೊರೋನ ಸೊಂಕು ಕಂಡು ಬಂದಿದ್ದು, ಅವರನ್ನು ಚಾಮರಾಜನಗರದ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ರವಿವಾರ ಸಂಜೆಯ ತನಕ ಚಾಮರಾಜನಗರ ಪಟ್ಟಣದ ಕೋರ್ಟ್ ರಸ್ತೆ, ರೈಲ್ವೆ ಬಡಾವಣೆ, 14 ನೇ ವಾರ್ಡ್, ಕೆ.ಪಿ ಮೊಹಲ್ಲಾ, ಕಾಗಲವಾಡಿ ಒಟ್ಟು 5 ಮಂದಿಗೆ ಕೊರೋನ ಸೋಂಕು ದೃಢಪಟ್ಟಿವೆ.

ಕೊಳ್ಳೇಗಾಲ ಪಟ್ಟಣದ ಭೀಮನಗರ ಪರಮೇಶ್ವರಿ ದೇವಸ್ಥಾನ ಬೀದಿ, ಕುರುಬರ ಬೀದಿ, ಹಳೇ ಬೆಂಗಳೂರು ರಸ್ತೆ, ಮಧುವನಹಳ್ಳಿ, ಧನಗೆರೆ, ಲಿಂಗಣಾಪುರ ರಸ್ತೆ, 9ನೇ ವಾರ್ಡ್, ಸಿಂಗನಲ್ಲೂರು, ಐಬಿ ರಸ್ತೆ ಹಾಗೂ ಮಾನಸ ಕಾಲೇಜು ರಸ್ತೆಯಲ್ಲಿ ಎರಡು ಪ್ರಕರಣ ಸೇರಿ 13 ಮಂದಿಗೆ ಕೊರೋನ ಸೋಂಕು ದೃಢಪಟ್ಟಿವೆ. ಗುಂಡ್ಲುಪೇಟೆ ಪಟ್ಟಣದ ಕೆ.ಎಸ್.ಎನ್ ಬಡಾವಣೆಯಲ್ಲಿ 1, ಜನತಾ ಕಾಲೋನಿ, ಪಂಜನಹಳ್ಳಿಯಲ್ಲಿ ತಲಾ ಎರಡು ಪ್ರಕರಣ ಸೇರಿ 5 ಮಂದಿಗೆ ಕೊರೋನ ಸೋಂಕು ದೃಢಪಟ್ಟಿವೆ.

ಹನೂರು ತಾಲೂಕಿನ ಮಲೆ ಮಹದೇಶ್ವರ ಪೊಲೀಸ್ ಕ್ವಾಟ್ರಸ್‍ನಲ್ಲಿ ಒಬ್ಬರಿಗೆ ಕೊರೋನ ಸೋಂಕು ಕಾಣಿಸಿಕೊಂಡಿದೆ. ಯಳಂದೂರಿನ ಬಳೇಪೇಟೆ, ಗೌತಮ ಬೀದಿ, ಹಾಗೂ ಮಾಂಬಳ್ಳಿಯಲ್ಲಿ ಸೇರಿ 3 ಮಂದಿಗೆ ಕೊರೋನ ಸೊಂಕು ಕಾಣಿಸಿಕೊಂಡಿದೆ. ಮೈಸೂರು ಜಿಲ್ಲೆಯ ಮೂಗೂರಿನಿಂದ ಬಂದ ವ್ಯಕ್ತಿಯೊಬ್ಬರು ಹಾಗೂ ಮೈಸೂರಿನ ನಾಯ್ಡು ನಗರದ ಮೂವರಿಗೆ ಸೇರಿ ಅಂತರ್ ಜಿಲ್ಲೆಯ ನಾಲ್ವರಿಗೆ ಕೊರೋನ ಸೊಂಕು ಕಾಣಿಸಿಕೊಂಡಿದೆ.

ಜಿಲ್ಲೆಯಲ್ಲಿ ಪತ್ತೆ ಹಚ್ಚಿದ ಕೊರೋನ ಸೋಂಕಿತರು ವಾಸ ಮಾಡುವ ಪ್ರದೇಶವನ್ನು ಸ್ಯಾನಿಟೈಸ್ ಮಾಡಿದ್ದು, ಕಂಟೈನ್ಮೆಂಟ್ ಝೋನ್ ಎಂದು ಜಿಲ್ಲಾಡಳಿತ ಘೋಷಣೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News