ಭವಿಷ್ಯದ ಭಾರತಕ್ಕೆ ಏನನ್ನು ಕಲಿಸಲು ಹೊರಟಿದ್ದೀರಿ: ಝಮೀರ್ ಅಹ್ಮದ್ ಪ್ರಶ್ನೆ

Update: 2020-07-29 14:30 GMT

ಬೆಂಗಳೂರು, ಜು.29: ವಿಶ್ವಪ್ರೇಮವನ್ನು ಸಾರಿದ ಪ್ರವಾದಿ ಮುಹಮ್ಮದ್(ಸ) ಅವರು, ಜೀಸಸ್‍ರಂಥ ದಿವ್ಯ ಚೇತನಗಳನ್ನು, ಸ್ವಾತಂತ್ರ್ಯಕ್ಕಾಗಿ ಮಡಿದ ಟಿಪ್ಪು ಸುಲ್ತಾನ್, ರಾಯಣ್ಣನಂಥ ವೀರ ಸೇನಾನಿಗಳನ್ನು ಪಠ್ಯಕ್ರಮದಿಂದ ಕೈಬಿಟ್ಟು ಭವಿಷ್ಯದ ಭಾರತಕ್ಕೆ ಏನನ್ನು ಕಲಿಸಲು ಹೊರಟಿದ್ದೀರಾ ಸುರೇಶ್ ಕುಮಾರ್ ಅವರೇ? ನೀವು ಮಾಡುತ್ತಿರುವುದು ದೇಶದ್ರೋಹ, ಜನದ್ರೋಹವಾಗುತ್ತದೆ ಎಂದು ಮಾಜಿ ಸಚಿವ ಝಮೀರ್ ಅಹ್ಮದ್ ಖಾನ್ ಟ್ವೀಟ್ ಮಾಡಿದ್ದಾರೆ.

ಭಾವೈಕ್ಯತೆ, ಶಾಂತಿ, ಸಹಬಾಳ್ವೆಯನ್ನು ಸಾರಿದ ಮಹಾಪುರುಷರ ಪಠ್ಯವಿಷಯವನ್ನೇ ಉದ್ದೇಶಪೂರ್ವಕವಾಗಿ 10ನೇ ತರಗತಿವರೆಗಿನ ಪಠ್ಯಕ್ರಮದಿಂದ ಕೈಬಿಟ್ಟಿರುವ ಸರಕಾರದ ನಿರ್ಧಾರದ ಹಿಂದೆ ದುರುದ್ದೇಶ ಅಡಗಿದೆ. ತಕ್ಷಣ ಸುರೇಶ್ ಕುಮಾರ್ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ  ಮಧ್ಯಪ್ರವೇಶಿಸಿ, ಈ ತಪ್ಪನ್ನು ಸರಿಪಡಿಸಬೇಕು ಎಂದು ಝಮೀರ್ ಅಹ್ಮದ್ ಖಾನ್ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News