ಫ್ರಾನ್ಸ್ ನಿಂದ ಬಂದ ರಫೇಲ್ ಯುದ್ಧ ವಿಮಾನದಲ್ಲಿ ಕರ್ನಾಟಕದ ಪೈಲಟ್

Update: 2020-07-29 14:57 GMT
ಅರುಣ ಕುಮಾರ

ವಿಜಯಪುರ, ಜು.29: ಫ್ರಾನ್ಸ್ ನಿಂದ 5 ರಫೇಲ್ ಯುದ್ಧ ವಿಮಾನಗಳು ಈಗಾಗಲೇ ಭಾರತಕ್ಕೆ ಬಂದಿದ್ದು, ಇದರಲ್ಲಿ ಕರ್ನಾಟಕದ ವಿಜಯಪುರ ಮೂಲದ ಸೈನಿಕರೊಬ್ಬರು ಪೈಲಟ್ ಆಗಿದ್ದರು.

ವಿಜಯಪುರ ಸೈನಿಕ ಕಲಿತಿದ್ದ ಅರುಣ ಕುಮಾರ ಭಾರತಕ್ಕೆ ಬಂದ ಯುದ್ಧ ವಿಮಾನಗಳ ಪೈಲಟ್ ಗಳ ಪೈಕಿ ಒಬ್ಬರಾಗಿದ್ದರು.

ಭಾರತೀಯ ಏರ್ ಫೋರ್ಸ್ ಸೇನೆಯಲ್ಲಿ ವಿಂಗ್ ಕಮಾಂಡರ್ ಆಗಿದ್ದ 35 ವರ್ಷದ ಅರುಣ ಕುಮಾರ, ವಿಜಯಪುರದ ಸೈನಿಕ‌ ಶಾಲೆಯ ವಿದ್ಯಾರ್ಥಿಯಾಗಿದ್ದರು. ಇವರು 1995 ರಿಂದ 2001ರ ಬ್ಯಾಚ್ ವಿದ್ಯಾರ್ಥಿಯಾಗಿದ್ದಾರೆ.

ಅರುಣ ಕುಮಾರ ಜನವರಿ 2002ರಲ್ಲಿ ಎನ್ ಡಿಎ(ನ್ಯಾಷನಲ್ ಡಿಫೆನ್ಸ್ ಆರ್ಮಿ) ಗೆ ಸೇರ್ಪಡೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ತಂದೆ ಎನ್.ಪ್ರಸಾದ್ ಕೂಡಾ ಏರ್ಫೋರ್ಸ್ ನಲ್ಲಿ ವಾರಂಟ್ ಆಫೀಸರ್ ಆಗಿ ಸೇವೆ ಸಲ್ಲಿಸಿದ್ದಾರೆ.

ಫ್ರಾನ್ಸ್ ಮೂಲದ ಡಸಾಲ್ಟ್ ಕಂಪೆನಿ ನಿರ್ಮಿಸಿರುವ ಮೊದಲ ಐದು ರಫೇಲ್ ಯುದ್ದ ವಿಮಾನಗಳು ಹರ್ಯಾಣದ ಅಂಬಾಲದ ವಾಯು ನೆಲೆಯಲ್ಲಿ ಇಂದು ಭೂ ಸ್ಪರ್ಶ ಮಾಡಿವೆ. ಈ ವಿಮಾನಗಳು ಜುಲೈ 27ರಂದು ಫ್ರಾನ್ಸ್‌ನಿಂದ ಹೊರಟಿದ್ದು, ಮಂಗಳವಾರ ಯುಎಇಯನ್ನು ತಲುಪಿದ್ದವು. ಭಾರತೀಯ ವಾಯು ಪಡೆಯ ನೌಕಾಬಲಕ್ಕೆೆ ಸೇರ್ಪಡೆಯಾಗಲಿರುವ ಈ ವಿಮಾನಗಳು ಒಂದೇ ದಿನ ಸುಮಾರು 7,000 ಕಿ.ಮೀ. ದೂರವನ್ನು ಕ್ರಮಿಸಿವೆ. ಎರಡು ದಶಕಗಳ ಬಳಿಕ ಭಾರತಕ್ಕೆ ಆಗಮಿಸಿರುವ ಮೊದಲ ಪ್ರಮುಖ ವಿಮಾನಗಳನ್ನು ಭಾರತೀಯ ವಾಯುಪಡೆಯ ಮುಖ್ಯಸ್ಥ ಆರ್‌ಕೆಎಸ್ ಭದೌರಿಯಾ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News