ಬಿಜೆಪಿಯವರು ಶವದ ಮೇಲೆ ಕುಳಿತು ಊಟ ಮಾಡಲೂ ಹಿಂಜರಿಯುವುದಿಲ್ಲ: ಬಿ.ಕೆ. ಹರಿಪ್ರಸಾದ್ ವಾಗ್ದಾಳಿ

Update: 2020-07-31 16:29 GMT

ಕಾರವಾರ: ರಾಜ್ಯ ಸರಕಾರ ಬಿಜೆಪಿ ಸರಕಾರ ಕೋವಿಡ್ ಹೆಸರಲ್ಲಿ ಭಾರೀ ಪ್ರಮಾಣದಲ್ಲಿ ಅವ್ಯವಹಾರ ನಡೆಸುತ್ತಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಬಿ.ಕೆ. ಹರಿಪ್ರಸಾದ್ ಆರೋಪಿಸಿದ್ದಾರೆ.

ಕಾರವಾರಕ್ಕೆ ಭೇಟಿ ನೀಡಿದ ಅವರು ಜಿಲ್ಲಾ ಪತ್ರಿಕಾ  ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸರಕಾರ ಕೊರೊನ ಸೋಂಕು ತಡೆಯುವಲ್ಲಿ ಕೇಂದ್ರ ಸರಕಾರ ಸಂಪೂರ್ಣ ವಿಫಲಾಗಿದೆ. 2 ಸಾವಿರ ಕೋಟಿ ರೂ. ಅವ್ಯವಹಾರವಾಗಿದೆ ಎಂದು ಆರೋಪಿಸಿದರು.

ಪ್ರಧಾನಿ ಮೋದಿ ಅವರು ಕೇವಲ ಭಾಷಣದಲ್ಲಿ ದಿನ ಕಳೆದಿದ್ದಾರೆ. ನಾಟಕ ಮಾಡುವುದರಲ್ಲಿ ಪ್ರಧಾನಿ ನಿಸ್ಸೀಮರು. ಗಂಟೆ, ಚಪ್ಪಾಳೆ ಬಾರಿಸಿ ದೀಪ ಹಚ್ಚಿ ನಾಟಕ ಮಾಡಿದ್ದಾರೆ ಎಂದು ಲೇವಡಿ ಮಾಡಿದ ಅವರು ಕುದುರೆ ವ್ಯಾಪಾರದಲ್ಲಿ ಸರಕಾರ ನಿರತವಾಗಿದ್ದು, ಬಿಜೆಪಿಯವರು ಹೆಣದ ಮೇಲೆ ಹಣ ಮಾಡುವಂತವರಾಗಿದ್ದು ಶವದ ಮೇಲೆ ಕುಳಿತು ಊಟ ಮಾಡಲು ಸಹ ಹಿಂಜರಿಯುವುದಿಲ್ಲ. ಬಿಜೆಪಿಗರಿಗೆ ಯಾವುದೇ ನಾಚಿಕೆ ಇಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜ್ಯ ಸರ್ಕಾರ ಇಂತಹ ಕೊರೋನ ಸಾಂಕ್ರಾಮಿಕ ರೋಗದ ಸಂದರ್ಭದಲ್ಲೂ ಹಗರಣದಲ್ಲಿ ಸಿಕ್ಕಿ ಹಾಕಿಕೊಂಡಿದೆ. ಕೋವಿಡ್ ಸಂದರ್ಭದಲ್ಲಿ ಮಾನವೀಯತೆ ಮರೆತ ಬಿಜೆಪಿ ಸರಕಾರದ ವಿರುದ್ಧ ಹೈಕೋರ್ಟ್ ನ್ಯಾಯಾಧೀಶರಿಂದ ಹಗರಣದ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದು ಸರ್ಕಾರ ಈ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು. ಭ್ರಷ್ಟಾಚಾರ ಆರೋಪ ಹೊತ್ತವರು ತಕ್ಷಣ ರಾಜೀನಾಮೆ ನೀಡಬೇಕು. ಹಗರಣದಲ್ಲಿ ಆರೋಪ ಕೇಳಿ ಬಂದವರು ತಕ್ಷಣ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದರು.

ಮೂರು ತಿಂಗಳು ಘೋಷಿಸಿದ್ದ ಲಾಕ್ ಡೌನ್ ನ ಸಮಯದಲ್ಲಿ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಹೆಚ್ಚಿಸಬಹುದಿತ್ತು. ಆದರೆ, ಮುಖ್ಯಮಂತ್ರಿ, ಪ್ರಧಾನಮಂತ್ರಿ ಇದರಲ್ಲಿ ವಿಫಲರಾಗಿದ್ದಾರೆ. ಕೇವಲ ಭಾಷಣದಲ್ಲಿ ನಿರತರಾಗಿದ್ದರು. ಕೊರೋನ ಸಂದರ್ಭದಲ್ಲಿ ವಿವಿಧ ಸುರಕ್ಷತಾ ಸಾಮಗ್ರಿಗಳನ್ನು ಖರೀದಿಸುವ ಸಂದರ್ಭದಲ್ಲಿ ಸರ್ಕಾರ 2,000 ಕೋಟಿ ಹಗರಣವನ್ನು ಮಾಡಿದೆ ಎಂದು ಆರೋಪಿಸಿದ ಅವರು, ಬಿಜೆಪಿ ಮಾಜಿ ಶಾಸಕ ಬಗಲಿ ವೆಂಟಿಲೇಟರ್ ಸೆಕೆಂಡ್ ಹ್ಯಾಂಡ್ ಎಂದು ಲೋಕಾಯುಕ್ತಕ್ಕೆ ದೂರು ದಾಖಲಿಸಿದ್ದಾರ. ಬೆಂಗಳೂರಿನಲ್ಲಿ ಸದ್ಯ ಹೆರಿಗೆಗೂ ಆಸ್ಪತ್ರೆಗಳಿಲ್ಲ. ವಯಸ್ಸಾದವರು ಆಸ್ಪತ್ರೆಗಳೆದುರು ಸಾಯುತ್ತಿದ್ದಾರೆ ಎಂದು ಕಿಡಿಕಾರಿದರು. 

ರಾಜ್ಯ ಸರಕಾರ ಪಿಪಿಇ ಕಿಟ್, ಮಾಸ್ಕ್, ಥರ್ಮಲ್ ಸ್ಕ್ಯಾನಿರ್, ಸ್ಯಾನಿಟೈಸರ್, ಆಕ್ಸಿಜನ ಉಪಕರಣದಲ್ಲಿ ಭಾರೀ ಅವ್ಯವಹಾರ ಮಾಡಿದೆ. ಆರೋಗ್ಯ ಸಚಿವರ ಪ್ರಕಾರ 9.65 ಲಕ್ಷ ಪಿಪಿಇ ಕಿಟ್ ಗಳನ್ನು ಖರೀದಿ ಮಾಡಲಾಗಿದೆ. ಇದರಲ್ಲಿ ಮಹಾರಾಷ್ಟ್ರದ ಪ್ಲಾಸ್ಟ್ ಸರ್ಜಿ ಎಂಬ ಕಂಪೆನಿಯೊಂದಿಗೆ ಸುಮಾರು 3.50 ಲಕ್ಷ ಪಿಪಿಇ ಕಿಟ್ ಗಳನ್ನು ಖರೀದಿ ಮಾಡಿದ್ದಾರೆ. ಇವು ಕಳಪೆ ದರ್ಜೆಯವು ಎಂದು ರಾಜ್ಯಾದ್ಯಂತ ತೀವ್ರ ಆರೋಪ ವ್ಯಕ್ತಿವಾಗಿದೆ. ಅನೇಕ ಕಡೆ ವೈದ್ಯರು ಪ್ರತಿಭಟನೆ ಮಾಡಿದ್ಆರೆ. ದೂರುಗಳು ಬಂದ ಬಳಿಕ 25 ಲಕ್ಷ ಪಿಪಿಇ ಕಿಟ್ ಗಳನ್ನು ಸರ್ಕಾರ ವಾಪಸ್ ಪಡೆಯಿತು. ಉಳಿದವುಗಳನ್ನು ಈಗಾಗಲೇ ಬಳಸಲಾಗಿದೆ ಎಂದು ಅಪರ ನಿರ್ದೇಶಕರು ಆರೋಗ್ಯ ಇಲಾಖೆ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ನಮೂದಿಸಿದ್ದಾರೆ. ಕಂಪನಿಯಿಂದ ಏಪ್ರಿಲ್ 4ರಂದು ಸುಮಾರು 1 ಲಕ್ಷ ಪಿಪಿಇ ಕಿಟ್ ಗಳನ್ನು ಖರೀದಿಸಿದ್ದಾರೆ. ಪಾವತಿಸಿರುವ ದರ ಕಿಟ್ ಒಂದಕ್ಕೆ 2,117.53 ರೂ. ಇದೇ ಕಂಪನಿಗೆ 330 ರೂ.ಗಳನ್ನು ನೀಡಿ ಕಿಟ್ ಗಳನ್ನು ಖರೀದಿ ಮಾಡಲಾಗಿದೆ. ಇದರ ಮಾರ್ಕೆಟ್ ಬೆಲೆ 330 ರೂ. ಸರಕಾರ ಖರೀದಿ ಮಾಡಿದ್ದು ರೂ .2,117 ರಂತೆ 35 ಲಕ್ಷ ಖರೀದಿ ಮಾಡಿದೆ. ವೈದ್ಯರೇ ಪ್ರತಿರೋಧ ಮಾಡಿದ್ದಾರೆ. ಆ ಮೇಲೆ 1.5 ಲಕ್ಷ ವಾಪಾಸ್ ಮಾಡಿರುತ್ತಾರೆ. ಚೈನಾ ಕಂಪನಿಯ 35 ಲಕ್ಷ ಪಿ.ಪಿ.ಇ. ಕಿಟ್ ಗಳನ್ನು ಖರೀದಿಗೆ ಮುಖ್ಯಮಂತ್ರಿಗಳೇ ಅನುಮೋದನೆ ನೀಡಿದ್ದಾರೆ ಎಂದು ಆರೋಪಿಸಿದರು.

ಡಾ. ಸಾರ್ವಭೌಮ ಬಗಲಿಯವರು ಮಾಜಿ ಶಾಸಕರು ಲೋಕಾಯುಕ್ತರಿಗೆ ನೀಡಿರುವ ದೂರಿನಲ್ಲಿ ಕಳಪೆ ಕಿಟ್ ಗಳನ್ನು ದುಬಾರಿ ದರಕ್ಕೆ ಖರೀದಿ ಮಾಡಿರುವ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಕಳಪೆ ಗುಣಮಟ್ಟದ 2.25 ಲಕ್ಷ ಪಿಪಿಇ ಕಿಟ್ ಗಳನ್ನು ವೈದ್ಯರು ಮತ್ತು ಅರೆ ವೈದ್ಯ ಸಿಬ್ಬಂದಿಗೆ ಅವರಲ್ಲಿ ಅನೇಕರು ಸೋಂಕಿಗೆ ಒಳಪಟ್ಟು ಅನಾಹುತಗಳಿಗೆ ಈಡಾಗಿದ್ದಾರೆ. ಅದರ ಜವಾಬ್ದಾರಿ ಹೊರುವವರು ಯಾರು ? ಬಳ್ಳಾರಿ ವಿಮ್ಸ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 1200 ರೂ.ಗಳ ವರೆಗೆ ನೀಡಿ ಪಿಪಿಐ ಕಿಟ್ಗಳನ್ನು ಖರೀದಿಸಿದ್ದಾರೆ ಸರಕಾರ ಹೇಳಿದ ಇವರು ಹೇಳುತ್ತಿರುವಷ್ಟು ಪಿಪಿಇ ಕಿಟ್ ಗಳೇ ಇಲ್ಲ . ಆದರೂ ಹಣ ಪಾವತಿಸಲಾಗಿದೆ ಎಂದು ಆರೋಪಿಸಿದರು.

ಮಾಸ್ಕ್ ದರ ಮಾರುಕಟ್ಟೆಯಲ್ಲಿ 50-60 ರೂ . ಇದ್ದರೂ ಸುಮಾರು ಹತ್ತು ಲಕ್ಷ ಮಾಸ್ಕ್ ಳನ್ನು 126 ರೂ. 150 ರೂ.ಗಳ ವರೆಗೆ ಖರೀದಿ ಮಾಡಲಾಗಿದೆ. ಇದರಲ್ಲಿ ನಿಯಮ ಬಾಹಿರವಾಗಿ ಹಾಗೂ ಕಳಪೆ ಗುಣಮಟ್ಟದ ಮಾಸ್ಕ್ ಗಳನ್ನು ಖರೀದಿ ಮಾಡಲಾಗಿದೆ ಎಂದು ಕಂದಾಯ ಇಲಾಖೆಯು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ನೋಟಿಸ್ ನೀಡಿದೆ. ಆಂಧ್ರ ಪ್ರದೇಶದ ಕಂಪನಿಯೊಂದು ತಲಾ ರೂ . 280.92 ರಂತೆ 10 ಲಕ್ಷ ಎನ್ಮಾಸ್ಕ್ ಳನ್ನು ಸರಬರಾಜು ಮಾಡುವಂತೆ ಸರ್ಕಾರ ಆದೇಶ ನೀಡಿದೆ . ಈ ಮಾಸ್ಕ್ ಮಾರುಕಟ್ಟೆ ದರ ರೂ . 150 , ಥರ್ಮಲ್ ಸ್ಕ್ಯಾನರ್ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಥರ್ಮಲ್ ಸ್ಥಾನಗಳು ಸುಮಾರು 2 ರಿಂದ 3 ಸಾವಿರ ರೂ.ಗಳಿದ್ದರೂ ಸರ್ಕಾರದ ಆರೋಗ್ಯ ಇಲಾಖೆ 5945 ರೂ.ಗಳನ್ನು ನೀಡಿ ಖರೀದಿಸಿದೆ. ಥರ್ಮಲ್ ಸ್ಯಾನರ್ಗಳನ್ನು ಸಮಾಜ ಕಲ್ಯಾಣ ಇಲಾಖೆಯು 9 ಸಾವಿರ ರೂ.ಗಳನ್ನು ನೀಡಿ ಖರೀದಿಸಿ ಎಂದು ಆರೋಪಿಸಿದರು.

500 ಎಂಎಲ್ ಸ್ಯಾನಿಟೈಸರ್ ಗೆ ಮಾರುಕಟ್ಟೆಯಲ್ಲಿ 80-100 ಗಳಿದ್ದು ಇದಕ್ಕೆ 250 ರೂ. ನೀಡಿ ಖರೀದಿಸಿದ್ದಾರೆ. ಆದರೆ ಸಮಾಜ ಕಲ್ಯಾಣ ಇಲಾಖೆಯವರು ಇದೇ 500 ಎಂಎಲ್ ಬಾಟಲಿಗೆ 600 ರೂ.ಗಳನ್ನು ನೀಡಿದೆ. ಬೇರೆ ಬೇರೆ ಇಲಾಖೆಯವರು ಬೇರೆ ಬೇರೆ ದರದಲ್ಲಿ ಖರೀದಿ ಮಾಡಿರುತ್ತಾರೆ . ಎಲ್ಲಾ ಕಡೆ ಮಾರುಕಟ್ಟೆ ದರಕ್ಕಿಂತ 3-4 ಪಟ್ಟು ಜಾಸ್ತಿ ಬೆಲೆಗೆ ಖರೀದಿಸಿರುತ್ತಾರೆ ಎಂದು ಆರೋಪಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಸತೀಶ ಸೈಲ್, ಶಾರಾದ ಶೆಟ್ಟಿ, ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಇದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News