ಚಾಮರಾಜನಗರ: 700ರ ಗಡಿ ದಾಟಿದ ಕೊರೋನ ಸೋಂಕಿತರ ಸಂಖ್ಯೆ

Update: 2020-08-01 18:34 GMT

ಚಾಮರಾಜನಗರ, ಆ.1: ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ 700ರ ಗಡಿ ದಾಟಿದೆ. ಶನಿವಾರ ಜಿಲ್ಲೆಯಲ್ಲಿ 39 ಹೊಸ ಕೊರೋನ ಸೊಂಕಿತರನ್ನು ಪತ್ತೆ ಹಚ್ಚುವ ಮೂಲಕ ಜಿಲ್ಲೆಯಲ್ಲಿ ಶನಿವಾರ ಸಂಜೆಯ ತನಕ 708 ಕೊರೋನ ಪ್ರಕರಣ ಕಂಡುಬಂದಿದೆ.

ಶನಿವಾರ ಚಾಮರಾಜನಗರ ತಾಲೂಕಿನಲ್ಲಿ 8 ಮಂದಿ, ಕೊಳ್ಳೇಗಾಲ ತಾಲೂಕಿನಲ್ಲಿ 13 ಮಂದಿ, ಹನೂರು ತಾಲೂಕಿನ 2 ಮಂದಿ, ಯಳಂದೂರು ತಾಲೂಕಿನಲ್ಲಿ 7 ಮಂದಿ, ಗುಂಡ್ಲುಪೇಟೆ ತಾಲೂಕಿನಲ್ಲಿ 9 ಮಂದಿ ಸೇರಿ 39 ಮಂದಿಗೆ ಕೊರೋನ ಸೊಂಕು ಕಂಡು ಬಂದಿದ್ದು, ಅವರನ್ನು ಚಾಮರಾಜನಗರದ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಜಿಲ್ಲೆಯಲ್ಲಿ ಪತ್ತೆ ಹಚ್ಚಿದ ಕೊರೋನ ಸೋಂಕಿತರು ವಾಸ ಮಾಡುವ ಪ್ರದೇಶವನ್ನು ಸ್ಯಾನಿಟೈಸ್ ಮಾಡಿದ್ದು, ಕಂಟೈನ್ಮೆಂಟ್ ಝೋನ್ ಎಂದು ಜಿಲ್ಲಾಡಳಿತ ಘೋಷಣೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News