ಸರಕಾರಿ, ಖಾಸಗಿ ಶಾಲೆಗಳಲ್ಲಿ ಹಾಲಿನ ಪುಡಿ ವಿತರಣೆ

Update: 2020-08-02 14:40 GMT

ಬೆಂಗಳೂರು, ಆ.2: ಮಕ್ಕಳ ಪೌಷ್ಠಿಕತೆಯ ಮಟ್ಟವನ್ನು ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಕ್ಷೀರಭಾಗ್ಯ ಯೋಜನೆ ಫಲಾನುಭವಿಗಳಿಗೆ ಪಡಿತರ ದೊಂದಿಗೆ ಹಾಲಿನ ಪುಡಿಯನ್ನು ಸರಕಾರಿ ಹಾಗು ಅನುದಾನಿತ ಶಾಲೆಗಳಲ್ಲಿ ವಿತರಿಸುವಂತೆ ರಾಜ್ಯ ಸರಕಾರ ಕೊರೋನ ನಿರ್ವಹಣೆಗಾಗಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ರಚಿಸಲಾಗಿರುವ ಕಾರ್ಯಪಡೆಗಳಿಗೆ ನಿರ್ದೇಶನ ನೀಡಿದೆ.

ಸಾಂಕ್ರಾಮಿಕ ಕಾಯಿಲೆ ಕಾಣಿಸಿಕೊಂಡಾಗಿನಿಂದಲೂ ಬಹುತೇಕ ಮಂದಿ ಆರ್ಥಿಕವಾಗಿ ಹಿಂದುಳಿದಿರುವ ಸರಕಾರಿ ಮಕ್ಕಳ ಪೌಷ್ಟಿಕ ಮಟ್ಟದ ಬಗ್ಗೆ ಸರಕಾರ ಕಾಳಜಿ ವಹಿಸುತ್ತಿದ್ದು, ರಾಜ್ಯಾದ್ಯಂತ ಸರಕಾರಿ ಮತ್ತು ಅನುದಾನಿತ ಶಾಲೆಗಳಿಂದ ಸುಮಾರು 64 ಲಕ್ಷ ವಿದ್ಯಾರ್ಥಿಗಳನ್ನು ಈ ಯೋಜನೆ ಒಳಗೊಳ್ಳಲಿದೆ ಎಂದು ರಾಜ್ಯ ಹಾಲು ಮಹಾಮಂಡಳ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

ಈ ಯೋಜನೆಯಿಂದ ಒಂದರಿಂದ 10ನೇ ತರಗತಿಯವರೆಗೂ ನೀಡುತ್ತಿರುವುದರಿಂದ 64 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಳ್ಳಲಿದ್ದಾರೆ. ಸಾಮಾನ್ಯವಾಗಿ ಕ್ಷೀರ ಭಾಗ್ಯ ಯೋಜನೆಯಡಿ ಪ್ರತಿ ವಿದ್ಯಾರ್ಥಿಗೂ 18 ಗ್ರಾಮ್ ಪೌಡರ್ ನೀಡಲಾಗುತ್ತಿದೆ. ಆದರೆ, ಸಾಂಕ್ರಾಮಿಕ ರೋಗದ ಕಾರಣ ಶಾಲೆ ತೆರೆಯದ ಕಾರಣ ವಿದ್ಯಾರ್ಥಿಗಳಿಗೆ ಹಾಲು ದೊರೆಯುತ್ತಿಲ್ಲ. ಈ ಹಾಲಿನಲ್ಲಿ ಶೇ.3.5 ರಷ್ಟು ಕೊಬ್ಬಿನಾಂಶ ಇರಲಿದೆ. ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಅರ್ಧ ಕಿಲೋನಂತೆ ಎರಡು ತಿಂಗಳವರೆಗೂ ಹಾಲಿನ ಪೌಡರ್ ವಿತರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News