ಚಿಕ್ಕಮಗಳೂರು: ರವಿವಾರ 41 ಮಂದಿಗೆ ಕೊರೋನ ಪಾಸಿಟಿವ್

Update: 2020-08-02 17:36 GMT

ಚಿಕ್ಕಮಗಳೂರು: 2 ವರ್ಷದ ಮಗು ಸೇರಿದಂತೆ ಜಿಲ್ಲೆಯಲ್ಲಿ 41 ಮಂದಿಗೆ ಕೊರೋನ ಸೋಂಕು ತಗುಲಿರುವುದು ಪ್ರಯೋಗಾಲಯದ ವರದಿಯಿಂದ ರವಿವಾರ ದೃಢಪಟ್ಟಿದ್ದು, ಸೋಂಕಿನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಚಿಕ್ಕಮಗಳೂರು ತಾಲ್ಲೂಕಿನಲ್ಲಿ 30, ಕಡೂರು ತಾಲ್ಲೂಕಿನಲ್ಲಿ 4, ತರೀಕೆರೆ ತಾಲ್ಲೂಕಿನಲ್ಲಿ 5, ಹಾಗೂ ಮೂಡಿಗೆರೆ ಮತ್ತು ಅಜ್ಜಂಪುರ ತಾಲ್ಲೂಕಿನ ತಲಾ ಓರ್ವರಲ್ಲಿ ಸೋಂಕು ಕಂಡು ಬಂದಿದೆ.

ಚಿಕ್ಕಮಗಳೂರು ಗಾಂಧಿನಗರ, ಶಂಕರಪುರ, ಕಲ್ಯಾಣನಗರ, ರಾಂಪುರ, ಉಂಡೇದಾಸರಹಳ್ಳಿ, ಕಳಸಾಪುರ, ಬಸ್ಕಲ್, ನೆಹರುನಗರ, ಜಯನಗರ, ಶ್ರೀನಿವಾಸನಗರ, ಪಂಪನಗರ, ಕೋಟೆ, ವಿಜಯಪುರ, ಲಕ್ಷ್ಮೀಶನಗರ ಅರೇಹಳ್ಳಿಯಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ.

ಕಡೂರು ತಾಲ್ಲೂಕಿನ ಬೀರೂರು ಪಟ್ಟಣ, ಲಕ್ಷ್ಮೀಶನಗರ, ಲಿಂಗದಹಳ್ಳಿ, ಹುಲಿಕೆರೆ ತರೀಕೆರೆ ತಾಲ್ಲೂಕಿನ ಮಹೇಶ್ವರಿ ದೇವಸ್ಥಾನ ರಸ್ತೆ, ಕೋಡಿಕ್ಯಾಂಪ್, ಬೆಟ್ಟದಹಳ್ಳಿ, ತ್ಯಾಗರಾಜನಗರ, ಅಜ್ಜಂಪುರ ತಾಲ್ಲೂಕಿನ ಪೇಟೆಬೀದಿ, ಮೂಡಿಗೆರೆ ತಾಲ್ಲೂಕಿನ ಓರ್ವ ವ್ಯಕ್ತಿಯಲ್ಲಿ ಸೋಂಕಿರುವುದು ದೃಢವಾಗಿದೆ.

ರವಿವಾರ ಪತ್ತೆಯಾಗಿರುವ 41 ಮಂದಿ ಸೋಂಕಿತರನ್ನು ಜಿಲ್ಲೆಯಲ್ಲಿ ತೆರೆಯಲಾಗಿರುವ ಕೋವಿಡ್-19 ಕೇರ್ ಸೆಂಟರ್ ಮತ್ತು ಕೆಲವರನ್ನು ಸೋಂಕಿತರ ಮನೆಯಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರು ಮನೆ ಹಾಗೂ ಸುತ್ತಮುತ್ತಲ ಪ್ರದೇಶವನ್ನು ಸೀಲ್‍ಡೌನ್ ಮಾಡಲಾಗಿದೆ.

ಸೋಂಕಿತರ ಪ್ರಾಥಮಿಕ, ದ್ವಿತೀಯ ಸಂಪರ್ಕಕ್ಕೆ ಬಂದವರ ಪತ್ತೆ ಕಾರ್ಯಕ್ಕೆ ಜಿಲ್ಲಾಡಳಿತ ತಂಡ ರಚಿಸಿದ್ದು, ಸೋಂಕಿತರು ಪತ್ತೆಯಾದ ಸುತ್ತಮುತ್ತಲ ಪ್ರದೇಶವನ್ನು ನಿರ್ಬಂಧಿತ ವಲಯವೆಂದು ಘೋಷಿಸಿರುವ ಜಿಲ್ಲಾಡಳಿತ ಈ ಪ್ರದೇಶಗಳ ನಿರ್ವಹಣೆಗೆ ಆಯಾ ತಾಲ್ಲೂಕು ತಹಶೀಲ್ದಾರ್ ನೇಮಿಸಿ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ.

ರವಿವಾರ ಪತ್ತೆಯಾದ 41 ಸೋಂಕಿತರು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1087ಕ್ಕೆ ಏರಿಕೆಯಾಗಿದ್ದು, 614 ಪ್ರಕರಣಗಳು ಸಕ್ರೀಯವಾಗಿದ್ದು, ಆಸ್ಪತ್ರೆ ಹಾಗೂ ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 11 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇದುವರೆಗೂ 440 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಸೋಂಕಿಗೆ ತುತ್ತಾದ 22 ಮಂದಿ ಮೃತಪಟ್ಟಿದ್ದಾರೆ.

ಸಾವಿನ ಸಂಖ್ಯೆ 22ಕ್ಕೆ ಏರಿಕೆ:

ಕೊರೊನಾ ಸೋಂಕು ತಗುಲಿ ಕೋವಿಡ್-19 ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 62ವರ್ಷದ ವ್ಯಕ್ತಿ ರವಿವಾರ ಮೃತಪಟ್ಟಿದ್ದು, ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಜಿಲ್ಲೆಯಲ್ಲಿ 22ಕ್ಕೆ ಏರಿಕೆಯಾಗಿದೆ.

ಚಿಕ್ಕಮಗಳೂರು ಪಂಪಾನಗರದ 62ವರ್ಷದ ವ್ಯಕ್ತಿಯಲ್ಲಿ ಇತ್ತೀಚೆಗೆ ಸೋಂಕು ಕಂಡುಬಂದಿದ್ದು, ಅವರನ್ನು ಕೋವಿಡ್-19 ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ರವಿವಾರ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News