ಕೊಡಗಿನಲ್ಲಿ ಕೊರೋನ ಸೋಂಕಿತರ ಸಂಖ್ಯೆ 472 ಕ್ಕೆ ಏರಿಕೆ

Update: 2020-08-02 17:39 GMT

ಮಡಿಕೇರಿ,ಆ.2: ಕೊಡಗು ಜಿಲ್ಲೆಯಲ್ಲಿ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 472ಕ್ಕೆ ಏರಿಕೆಯಾಗಿದ್ದು, ಈ ಪೈಕಿ 313 ಮಂದಿ ಗುಣಮುಖರಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 150 ಆಗಿದ್ದು, 9 ಮಂದಿ ಸಾವಿಗೀಡಾಗಿದ್ದಾರೆ. 110 ಕಂಟೈನ್‍ಮೆಂಟ್ ವಲಯಗಳನ್ನು ಸ್ಥಾಪಿಸಲಾಗಿದೆ. ರವಿವಾರ ಬೆಳಗ್ಗೆ 9 ಹಾಗೂ ಮಧ್ಯಾಹ್ನದ ವೇಳೆಗೆ 3 ಕೋವಿಡ್ ಪ್ರಕರಣಗಳು ದೃಢಪಟ್ಟಿದೆ.

ಮಡಿಕೇರಿಯ ರಾಣಿಪೇಟೆಯ ಹೇಮರಾಜ್ ಕಾಂಪೌಂಡಿನ 36 ವರ್ಷದ ಮಹಿಳೆ, 16 ಮತ್ತು 11 ವರ್ಷದ ಬಾಲಕಿ, ಮಡಿಕೇರಿಯ ಪೊಲೀಸ್ ವಸತಿ ಗೃಹದ 38 ವರ್ಷದ ಪುರುಷ ಪೊಲೀಸ್ ಸಿಬ್ಬಂದಿ, ಕೂಡು ರಸ್ತೆಯ 54 ವರ್ಷದ ಪುರುಷ, ಸುಂಟಿಕೊಪ್ಪದ ಕಾನ್‍ಬೈಲಿನ 15 ವರ್ಷದ ಬಾಲಕಿ, ಕುಶಾಲನಗರದ ಹುಲುಸೆಯ 45 ವರ್ಷದ ಪುರುಷ, ವೀರಾಜಪೇಟೆಯ ಗೋಣಿಕೊಪ್ಪದ ಈರಣ್ಣ ಕಾಲೋನಿಯ 45 ವರ್ಷದ ಮಹಿಳೆ, ರ್ಯಾಪಿಡ್  ಆಂಟಿಜೆನ್ ಪರೀಕ್ಷೆಯ ಮುಖಾಂತರ ಮಡಿಕೇರಿಯ ಎಲ್ ಐ ಸಿ ವಸತಿ ಗೃಹದ 22 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ. 

ಮಧ್ಯಾಹ್ನದ ವೇಳೆಗೆ ಮೈಸೂರು ಪ್ರಯಾಣದ ಇತಿಹಾಸವಿರುವ ನೆಲ್ಲಿಹುದಿಕೇರಿ ಎಂ.ಜಿ.ಕಾಲೋನಿಯ 31 ವರ್ಷದ ಪುರುಷ, ಮಡಿಕೇರಿ ಮುತ್ತಪ್ಪ ದೇವಾಲಯದ ಬಳಿಯ 63 ವರ್ಷದ ಪುರುಷ, ಕೂಡುರಸ್ತೆಯ 35 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News