ಶಾಸಕ ಹರತಾಳು ಹಾಲಪ್ಪ, ಅವರ ಪತ್ನಿ ಹಾಗೂ ಕಾರು ಚಾಲಕನಿಗೆ ಕೊರೋನ ಪಾಸಿಟಿವ್

Update: 2020-08-04 11:47 GMT

ಶಿವಮೊಗ್ಗ, ಆ.4: ಜಿಲ್ಲೆಯ ಸಾಗರ ಕ್ಷೇತ್ರದ ಶಾಸಕ ಹಾಗೂ ಇತ್ತೀಚೆಗಷ್ಟೇ ಎಂಎಸ್‌ಐಎಲ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಹರತಾಳು ಹಾಲಪ್ಪ ಅವರಿಗೆ ಕೊರೋನ ಸೋಂಕು ತಗಲಿದೆ. ಹಾಲಪ್ಪ ಅವರ ಪತ್ನಿ ಹಾಗೂ ಕಾರು ಚಾಲಕ ಮತ್ತು ಓರ್ವ ಸಿಬ್ಬಂದಿಗೂ ಸಹ ಕೊರೋನ ಸೋಂಕು ದೃಢಪಟ್ಟಿದೆ. 

ಹಾಲಪ್ಪ ಈಗಾಗಲೇ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಕಳೆದ ವಾರವಷ್ಟೇ ಇವರನ್ನು ಎಂಎಸ್ಐಎಲ್‌ಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು. ಬೆಂಗಳೂರಿನಲ್ಲಿ ಅಧಿಕಾರ ಸ್ವೀಕಾರ ಸಮಾರಂಭ ಸಹ ನಡೆದಿತ್ತು. ಇದೀಗ ಹಾಲಪ್ಪ ಅವರು ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News