ಆ.7, 8 ರಂದು ಫೇಸ್‍ಬುಕ್ ಲೈವ್ ಮೂಲಕ ಅಹೋರಾತ್ರಿ ‘ಕಾಡುವ ಕಿರಂ’ ಕಾರ್ಯಕ್ರಮ

Update: 2020-08-04 18:37 GMT

ಬೆಂಗಳೂರು, ಆ.4: ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಹಾಗೂ ಹಿರಿಯ ಕವಿ ಕಿರಂ ಅವರ ನೆನಪಿನಾರ್ಥವಾಗಿ ಆ.7 ಮತ್ತು 8 ರಂದು ಫೇಸ್‍ಬುಕ್ ಲೈವ್ ಮೂಲಕ ಅಹೋರಾತ್ರಿ ಕಾಡುವ ಕಿರಂ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಜನಸಂಸ್ಕೃತಿ ಪ್ರತಿಷ್ಠಾನ, ಕಾವ್ಯಮಂಡಲ, ಬೆಂಗಳೂರು ಆರ್ಟ್ ಫೌಂಡೇಷನ್, ಅವಿರತ ಸಂಸ್ಥೆಗಳ ಜಂಟಿಯಾಗಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಪತ್ರಕರ್ತ ಹಾಗೂ ಕವಿ ಜಿ.ಪಿ.ಬಸವರಾಜು ಮಾಡಲಿದ್ದಾರೆ.

ಅನಂತರ 10:45 ರಿಂದ 11:30 ರವರೆಗೆ ವಿಶೇಷ ಉಪನ್ಯಾಸಗಳು ನಡೆಯಲಿದ್ದು, ಮುಖ್ಯವಾಗಿ ಸೃಜನಶೀಲ ಕುಮಾರವ್ಯಾಸ ಕುರಿತು ಕಾಳೇಗೌಡ ನಾಗವಾರ ಹಾಗೂ ಹೊಸ ಶಿಕ್ಷಣ ನೀತಿ ಮತ್ತು ಭಾರತೀಯ ಭಾಷೆಗಳ ಸವಾಲುಗಳು ವಿಷಯದ ಕುರಿತು ರಂಗನಾಥ ಕಂಟನಕುಂಟೆ ವಿಷಯ ಮಂಡನೆ ಮಾಡಲಿದ್ದಾರೆ.

ಕಾವ್ಯ ನಮನ ನಡೆಯಲಿದ್ದು, ಆರ್.ಕೆ.ನಲ್ಲೂರು ಪ್ರಸಾದ್, ಎಲ್.ಹನುಮಂತಯ್ಯ, ನಾಗತಿಹಳ್ಳಿ ಚಂದ್ರಶೇಖರ್, ಬಸು ಸೂಳಿಭಾವಿ, ರಂಗನಾಥ ಕಂಟನಕುಂಟೆ, ಶೃತಿ ಬಿ.ಆರ್ ಹಾಗೂ ಮಂಗಳಾ ಸೇರಿದಂತೆ ಅನೇಕರು ಪಾಲ್ಗೊಳ್ಳುವರು. ಇದೇ ವೇಳೆ ಕಿ.ರಂ. ಪ್ರಶಸ್ತಿ ಪ್ರದಾನ ನಡೆಯಲಿದ್ದು, ಹಿರಿಯ ವಿಮರ್ಶಕ ಜಿ.ರಾಜಶೇಖರ್ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

ಮಧ್ಯಾಹ್ನ 1 ಗಂಟೆಗೆ ವಿಶೇಷ ಉಪನ್ಯಾಸ ನಡೆಯಲಿದ್ದು ಮಹಾದೇವಿ ಅಕ್ಕನ ಕಾವ್ಯ ಕುರಿತು ವಿಶೇಷ ಉಪನ್ಯಾಸ: ಡಾ.ಎಂ ಉಷಾ ಮಾತನಾಡಲಿದ್ದಾರೆ. ಬಳಿಕ ಕಾವ್ಯ ನಮನ ನಡೆಯಲಿದ್ದು, ಕಾದಂಬಿನಿ ರಾವಿ, ಕೆ.ಷರೀಫಾ, ಮಮತಾ ಜಿ ಸಾಗರ, ಎಂ.ಆರ್.ಕಮಲ, ಪ್ರತಿಭಾ ನಂದಕುಮಾರ್ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ.

ಮಧ್ಯಾಹ್ನ 3ಕ್ಕೆ ಕಾವ್ಯ ಮತ್ತು ಸಮಕಾಲೀನ ಸಮಾಜ ವಿಷಯದ ಬಗ್ಗೆ ಪ್ರೋ. ಪುರುಷೋತ್ತಮ ಬಿಳಿಮಲೆ ವಿಶೇಷ ಉಪನ್ಯಾಸ ನೀಡಲಿದ್ದಾರೆ. ನಂತರ ನುಡಿನಮನ ನಡೆಯಲಿದೆ ಹಾಗೂ ಸವಿತಾ ನಾಗಭೂಷಣ ಅವರಿಗೆ ಕಿ.ರಂ. ಪ್ರಶಸ್ತಿ ಪ್ರದಾನ ನಡೆಯಲಿದೆ. ಬಳಿಕ ಕಾವ್ಯ ನಮನ ನಡೆಯಲಿದೆ.

ಸಂಜೆ 6 ಗಂಟೆಗೆ ಎಚ್.ಎಸ್. ಶಿವಪ್ರಕಾಶರ ಕಾವ್ಯ ಬಗ್ಗೆ ಪ್ರಕಾಶ್ ಬಡವನಹಳ್ಳಿ ಅವರಿಂದ ವಿಶೇಷ ಉಪನ್ಯಾಸ ನಡೆಯಲಿದೆ. ಅನಂತರ ಎಸ್.ಎಸ್.ಗುಬ್ಬಿ ಅವರಿಗೆ ಕಿ.ರಂ. ಪ್ರಶಸ್ತಿ ಪ್ರದಾನ ನಡೆಯಲಿದೆ. ಇದಾದ ಬಳಿಕ ನುಡಿನಮನ ನಡೆಯಲಿದ್ದು, ಪ್ರಾಧ್ಯಾಪಕ ಹುಲಿಕುಂಟೆ ಮೂರ್ತಿ ಉಪಸ್ಥಿತರಲಿದ್ದಾರೆ. ಬಳಿಕ ಕಾವ್ಯ ನಮನ ಹಾಗೂ ರಂಗ ನಮನ ನಡೆಯಲಿದೆ.

ರಾತ್ರಿ 8 ಗಂಟೆಗೆ ಕಿ.ರಂ. ನುಡಿನಮನ ನಡೆಯಲಿದ್ದು, ವಡ್ಡಗೆರೆ ನಾಗರಾಜಯ್ಯ ಉಪಸ್ಥಿತರಿರುವರು. ಇದೇ ವೇಳೆ ಬಿ.ಸುಜ್ಞಾನಮೂರ್ತಿ ಅವರಿಗೆ ಕಿ.ರಂ. ಪ್ರಶಸ್ತಿ ಪ್ರದಾನ ನಡೆಯಲಿದೆ ಹಾಗೂ ಈ ವೇಳೆ ಕಾವ್ಯ ನಮನ ಹಾಗೂ ರಂಗ ನಮನ ನಡೆಯಲಿದೆ.

ರಾತ್ರಿ 9 ಕ್ಕೆ ನವಚಾರಿತ್ರಿಕ ವಾದ ಮತ್ತು ಕ್ರಿ.ರಂ. ಪ್ರೇರಣೆಗಳು ವಿಷಯದ ಬಗ್ಗೆ ಸಿ.ಆರ್.ಗೋವಿಂದರಾಜ್‍ರಿಂದ ವಿಶೇಷ ಉಪನ್ಯಾಸ ನಡೆಯಲಿದೆ. ಈ ವೇಳೆ ಕಾವ್ಯ ನಮನ ನಡೆಯಲಿದೆ. ನಂತರ ಕಿ.ರಂ. ನುಡಿನಮನ ಆಯೋಜಿಸಿದ್ದು, ಮುಗಿದ ಬಳಿಕ ಕಾವ್ಯ ನಮನ ನಡೆಯಲಿದೆ. ರಾತ್ರಿ: 12ಕ್ಕೆ ನುಡಿನಮನ ಹಾಗೂ ಕಾವ್ಯ ನಮನ ನಡೆಯುತ್ತದೆ. ಮಧ್ಯರಾತ್ರಿ 2ಕ್ಕೆ ಕಾವ್ಯ ಮತ್ತು ಬದುಕು ಕುರಿತು ಎಂ.ಎಸ್.ಮೂರ್ತಿರಿಂದ ವಿಶೇಷ ಉಪನ್ಯಾಸ ಹಾಗೂ ಕಾವ್ಯ ನಮನ ನಡೆಯಲಿದೆ.

ಮುಂಜಾನೆ 4 ಕ್ಕೆ ಹಾಗೂ 6 ಕ್ಕೆ ಎರಡು ಬಾರಿ ನುಡಿ ನಮನ ನಡೆಯಲಿದೆ. ಬಳಿಕ ಕಾವ್ಯ ನಮನ ನಡೆಯಲಿದ್ದು, ಬೆಳಗ್ಗೆ 8 ಕ್ಕೆ ಮತ್ತೊಮ್ಮೆ ನುಡಿ ನಮನ ನಡೆಯಲಿದೆ. ಬಳಿಕ ಕವಿನಮನ ನಡೆಯಲಿದೆ.

ಬೆಳಗ್ಗೆ 9 ಕ್ಕೆ ನುಡಿನಮನ ಆಯೋಜಿಸಿದ್ದು ಶೂದ್ರ ಶ್ರೀನಿವಾಸ್ ಪಾಲ್ಗೊಳ್ಳುವರು. ಬಳಿಕ ಕವಿ ನಮನ ನಡೆಯಲಿದೆ. ಬೆಳಗ್ಗೆ 10 ಕ್ಕೆ ಮತ್ತೊಮ್ಮೆ ಕವಿನಮನ ನಡೆದು, ಬೆಳಗ್ಗೆ 10.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಅದರಲ್ಲಿ ಸಿ.ಎಸ್. ದ್ವಾರಕಾನಾಥ್ ಪಾಲ್ಗೊಳ್ಳುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News