ಕೊಡಗಿನಲ್ಲಿ ಕೊರೋನ ಸೋಂಕಿತರ ಸಂಖ್ಯೆ 585ಕ್ಕೆ ಏರಿಕೆ: ಪತ್ರಕರ್ತರಿಗೂ ಪರೀಕ್ಷೆ

Update: 2020-08-05 13:33 GMT

ಮಡಿಕೇರಿ ಆ.5: ಕೊಡಗು ಜಿಲ್ಲೆಯಲ್ಲ್ಲಿ ಬುಧವಾರ 25 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 585ಕ್ಕೆ ಏರಿಕೆಯಾಗಿದೆ. ಇವರಲ್ಲಿ 342 ಮಂದಿ ಗುಣಮುಖರಾಗಿದ್ದು, 233 ಸಕ್ರಿಯ ಕೊರೊನಾ ಪ್ರಕರಣಗಳಿವೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ 10 ಮರಣ ಪ್ರಕರಣಗಳು ವರದಿಯಾಗಿದೆ. ಕಂಟೈನ್ಮೆಂಟ್ ವಲಯಗಳ ಸಂಖ್ಯೆ 157 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

ಬುಧವಾರ ಬೆಳಗ್ಗೆ 4 ಹೊಸ ಕೊರೊನ ಪ್ರಕರಣಗಳು ಪತ್ತೆಯಾಗಿದ್ದು, ಮಡಿಕೇರಿಯ ಆಜಾದ್ ನಗರದ 75 ಮತ್ತು 33 ವರ್ಷದ ಪುರುಷ, 27 ವರ್ಷದ ಮಹಿಳೆ ಹಾಗೂ ವಿರಾಜಪೇಟೆಯ ಬೆಕ್ಕೆಸೊಡ್ಲೂರುವಿನ 45 ವರ್ಷದ ಪುರುಷನಲ್ಲಿ  ಸೋಂಕು ದೃಢಪಟ್ಟಿದೆ. 

ಮಧ್ಯಾಹ್ನ 2 ಗಂಟೆ ವೇಳೆಗೆ 21 ಹೊಸ ಸೋಂಕಿನ ಪ್ರಕರಣಗಳು ಪತ್ತೆಯಾಗಿದೆ.  ಕುಶಾಲನಗರದ ವಾಸವಿ ಮಹಲ್ ಬಳಿಯ 47 ವರ್ಷದ ಮಹಿಳೆ,  ಎಚ್.ಆರ್.ಪಿ ಕಾಲೋನಿಯ 45 ವರ್ಷದ ಪುರುಷ, ಮುಳ್ಳುಸೋಗೆಯ ಕುವೆಂಪು ಬಡಾವಣೆಯ 80 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ.         

ಸೋಮವಾರಪೇಟೆಯ ಗೌಡಳ್ಳಿಯ ದೊಡ್ಡಮಳ್ತೆಯ 23 ವರ್ಷದ ಪುರುಷ, ಸೋಮವಾರಪೇಟೆಯ ರೇಂಜರ್ ಬ್ಲಾಕಿನ 26 ಮತ್ತು 24 ವರ್ಷದ ಪುರುಷ, ನಗರದ ಪೊಲೀಸ್ ವಸತಿ ಗೃಹದ 27 ವರ್ಷದ ಪುರುಷ, ಚೆಟ್ಟಳ್ಳಿ ಫಾರಂನ 24 ವರ್ಷದ ಮಹಿಳೆ, 2 ಮತ್ತು 3 ವರ್ಷದ ಬಾಲಕಿಯರು, ನೆಲ್ಲಿಹುದಿಕೇರಿಯ 28 ವರ್ಷದ ಪುರುಷ ಮತ್ತು 49 ವರ್ಷದ ಮಹಿಳೆಯಲ್ಲಿ ಕೊರೊನಾ ಸೋಂಕಿರುವುದು ದೃಢವಾಗಿದೆ. 

ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆಯ ಹುಲುಸೆ ಮೂಡರಹಳ್ಳಿಯ 49 ವರ್ಷದ ಪುರುಷ, ನಗರೂರು ಗ್ರಾಮದ 55 ವರ್ಷದ ಪುರುಷ, ತೊರೆನೂರುವಿನ 24 ವರ್ಷದ ಪುರುಷ,  ಹೆಬ್ಬಾಲೆಯ ಬಾರ್ ರಸ್ತೆಯ 17 ವರ್ಷದ ಮಹಿಳೆ, ಮಡಿಕೇರಿ ತಾಲ್ಲೂಕಿನ ಸಂಪಾಜೆಯ 41 ವರ್ಷದ ಪುರುಷ, ಮಡಿಕೇರಿ ಮಹದೇವಪೇಟೆಯ 36 ವರ್ಷದ ಪುರುಷ, ದಾಸವಾಳ ರಸ್ತೆಯ 51 ವರ್ಷದ ಮಹಿಳೆ, ಮಹದೇವಪೇಟೆಯ ಮಖಾನ್ ರಸ್ತೆಯ 48 ಮತ್ತು 21 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ.

ಜಿಲ್ಲೆಯಲ್ಲಿ 15 ಹೊಸದಾಗಿ ಕಂಟೈನ್‍ಮೆಂಟ್ ವಲಯಗಳನ್ನು ತೆರೆಯಲಾಗಿದೆ. ಆಜಾದ್ ನಗರ ಮಡಿಕೇರಿ ಮತ್ತು ಬೆಕ್ಕೆಸೊಡ್ಲೂರು ಕ್ಲಬ್ ಹತ್ತಿರ, ವಿರಾಜಪೇಟೆ. ವಾಸವು ಮಹಲ್ ಎದುರು ಪೊಲೀಸ್ ಮೈದಾನ, ಕುಶಾಲನಗರ. ಎಚ್‍ಆರ್‍ಪಿ ಕಾಲೋನಿ, ಕುಶಾಲನಗರ. ಕುವೆಂಪು ಬಡಾವಣೆ, ಮುಳ್ಳುಸೋಗೆ, ಕುಶಾಲನಗರ. ದೊಡ್ಡಮಳ್ತೆ ಗೌಡಳ್ಳಿ, ಸೋಮವಾರಪೇಟೆ. ಪೊಲೀಸ್ ಕ್ವಾರ್ಟಸ್, ಸೋಮವಾರಪೇಟೆ. ಚೆಟ್ಟಳ್ಳಿ ಫಾರ್ಮ್ ಚೆಟ್ಟಳ್ಳಿ ಸೋಮವಾರಪೇಟೆ. ಮೂದರವಳ್ಳಿ ಅಂಚೆ, ಹುಲುಸೆ, ಶನಿವಾರಸಂತೆ, ಸೋಮವಾರಪೇಟೆ. ನರೂರು ಗ್ರಾಮ, ಚಂಗದಹಳ್ಳಿ ಅಂಚೆ, ಸೋಮವಾರಪೇಟೆ. ಗ್ರಾಮ ಪಂಚಾಯಿತಿ ಎದುರು, ತೊರೆನೂರು, ಸೋಮವಾರಪೇಟೆ. ಬಾರ್ ರಸ್ತೆ ಹೆಬ್ಬಾಲೆ, ಕುಶಾಲನಗರ. ಮುಖ್ಯರಸ್ತೆ ಸಂಪಾಜೆ, ಮಡಿಕೇರಿ. ಕಾಫಿ ಬೋರ್ಡ್ ಹತ್ತಿರ ದಾಸವಾಳ ರಸ್ತೆ, ಮಡಿಕೇರಿ. ಯಮಹ ಶೋ ರೂಂ ಹತ್ತಿರ ಮಕ್ಕನ್ ಸ್ಟ್ರೀಟ್, ಮಹದೇವಪೇಟೆ ಬಡಾವಣೆಗಳ ಮೇಲೆ ಆರೋಗ್ಯ ಅಧಿಕಾರಿಗಳು ನಿಗಾ ಇರಿಸಿದ್ದಾರೆ.    

ಪತ್ರಕರ್ತರಿಗೆ ಕೋವಿಡ್ ಪರೀಕ್ಷೆ
ಕೊಡಗು ಜಿಲ್ಲಾ ಪತ್ರಕರ್ತರ ಸಂಘದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಕಾರದಲ್ಲಿ ಪತ್ರಕರ್ತರಿಗೆ ಬುಧವಾರ ಕೊರೋನ ಸೋಂಕು ಪರೀಕ್ಷೆ ಮಾಡಲಾಗಿದೆ.
ಡಾ.ಗೋಪಿನಾಥ್ ಉಸ್ತುವಾರಿಯಲ್ಲಿ ಮಡಿಕೇರಿಯ ಪತ್ರಿಕಾ ಭವನದಲ್ಲಿ ಗಂಟಲು ಮತ್ತು ಮೂಗಿನ ದ್ರವ ಸಂಗ್ರಹಿಸಲಾಯಿತು. 40 ಪತ್ರಕರ್ತರು ಹೆಸರು ನೋಂದಾಯಿಸಿಕೊಂಡಿದ್ದು, 29 ಮಂದಿ ಮಾದರಿ ನೀಡಿದರು. ಕೊರೋನ ವೈದ್ಯಕೀಯ ಪರೀಕ್ಷೆ ನಡೆದ ಹಿನ್ನೆಲೆಯಲ್ಲಿ ಪತ್ರಿಕಾ ಭವನ ಸಂಪೂರ್ಣ ಸ್ಯಾನಿಟೈಸರ್ ಮಾಡಲಾಯಿತು. 

ಗುರುವಾರ ಸಂಜೆ ಅಥವಾ ಶುಕ್ರವಾರ ಪತ್ರಕರ್ತರ ವೈದ್ಯಕೀಯ ಪರೀಕ್ಷಾ ವರದಿ ಸಿಗಲಿದೆ. ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಇಬ್ಬರು ಸದಸ್ಯರಿಗೆ ಈ ಹಿಂದೆಯೇ ಪಾಸಿಟಿವ್ ಬಂದಿದ್ದು, ಒಬ್ಬರು ಕೋವಿಡ್ ಆಸ್ಪತ್ರೆಯಲ್ಲಿ ಮತ್ತು ಇನ್ನೊಬ್ಬರು ಹೋಂ ಐಸೋಲೇಷನ್ ನಲ್ಲಿದ್ದಾರೆ. ಪತ್ರಕರ್ತರೊಬ್ಬರ ಪತ್ನಿಗೂ ಪಾಸಿಟಿವ್ ಬಂದಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News