ಸೆಮಿಸ್ಟರ್ ಜೊತೆಗೆ 'ಬ್ಯಾಕ್‍ಲಾಗ್' ವಿಷಯಗಳ ಪರೀಕ್ಷೆಗೆ ಸೂಚನೆ

Update: 2020-08-05 13:46 GMT

ಬೆಂಗಳೂರು, ಆ. 5: ಅಂತಿಮ ವರ್ಷದ (ಸೆಮಿಸ್ಟರ್) ಪದವಿ ಪರೀಕ್ಷೆಗಳ ಜೊತೆಗೆ ಬ್ಯಾಕ್‍ಲಾಕ್ ವಿಷಯಗಳ ಪರೀಕ್ಷೆಗಳನ್ನು ನಡೆಸುವಂತೆ ಎಲ್ಲ ವಿಶ್ವ ವಿದ್ಯಾಲಯಗಳು ಹಾಗೂ ಕಾಲೇಜುಗಳಿಗೆ ಉನ್ನತ ಶಿಕ್ಷಣ ಇಲಾಖೆ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಈಗಾಗಲೇ ಜುಲೈ 10ರಂದು ಹೊರಡಿಸಿದ ಆದೇಶದಂತೆ ಅಂತಿಮ ವರ್ಷದ (ಸೆಮಿಸ್ಟರ್) ಪದವಿ ಪರೀಕ್ಷೆಗಳ ಜೊತೆಗೆ ಬ್ಯಾಕ್‍ಲಾಗ್ ವಿಷಯಗಳ ಪರೀಕ್ಷೆಗಳನ್ನು ನಡೆಸುವಂತೆ ಎಲ್ಲ ವಿವಿಗಳಿಗೂ ಆದೇಶಿಸಲಾಗಿತ್ತು. ಆದರೆ, ಕೆಲ ವಿವಿಗಳು ವಿದ್ಯಾರ್ಥಿಗಳು ಬಾಕಿ ಉಳಿಸಿಕೊಂಡಿರುವ, ಅನುತ್ತೀರ್ಣರಾಗಿರುವ (ಬ್ಯಾಕ್‍ಲಾಕ್) ಹಿಂದಿನ ಸೆಮಿಸ್ಟರ್‍ಗಳ ವಿಷಯಗಳ ಪರೀಕ್ಷೆಗಳನ್ನು ನಡೆಸದಿರಲು ತೀರ್ಮಾನಿಸಿರುವುದು ಸರಕಾರದ ಗಮನಕ್ಕೆ ಬಂದಿದ್ದು, ಆದುದರಿಂದ ಅಂತಿಮ ವರ್ಷದ ವಿದ್ಯಾರ್ಥಿಗಳು ಪದವಿ ಪೂರೈಸಿಕೊಂಡು ಉನ್ನತ ವಿದ್ಯಾಭ್ಯಾಸ ಅಥವಾ ಉದ್ಯೋಗ ಪಡೆಯುವ ಉದ್ದೇಶದ ಹಿನ್ನೆಲೆಯಲ್ಲಿ ಅಂತಿಮ ವರ್ಷದ ಪದವಿ ಪರೀಕ್ಷೆಗಳ ಜೊತೆಗೆ ಬ್ಯಾಕ್‍ಲಾಗ್ ವಿಷಯಗಳ ಪರೀಕ್ಷೆಗಳನ್ನು ನಡೆಸಲು ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News