ಬೆಳಗಾವಿ: ಚಲಿಸುತ್ತಿದ್ದ ರೈಲಿನ ಮೇಲೆ ಕುಸಿದು ಬಿದ್ದ ಗುಡ್ಡ

Update: 2020-08-05 13:52 GMT

ಬೆಳಗಾವಿ, ಆ.5: ಚಲಿಸುತ್ತಿದ್ದ ರೈಲಿನ ಮೇಲೆ ಗುಡ್ಡ ಕುಸಿದ ಘಟನೆ ಗೋವಾ-ಕರ್ನಾಟಕ ಗಡಿ ಭಾಗದ ಕ್ಯಾಸಲ್‍ರಾಕ್ ಹಾಗೂ ಕರಂಜೋಲ್ ರೈಲ್ವೆ ಸ್ಟೇಷನ್ ಮಧ್ಯೆ ನಡೆದಿದ್ದು, ಅದೃಷ್ಟವಶಾತ್  ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.   

ಪಶ್ಚಿಮ ಘಟ್ಟದಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ಬುಧವಾರ ಗುಡ್ಡ ಕುಸಿದಿದೆ. ಸದ್ಯ ರೈಲ್ವೇ ಸಿಬ್ಬಂದಿ ಸ್ಥಳದಲ್ಲಿ ಬಿದ್ದ ಮಣ್ಣನ್ನು ತೆರವುಗೊಳಿಸಿ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿದ್ದಾರೆ. 

ನಿಝಾಮುದ್ದೀನ್-ವಾಸ್ಕೋಡಿಗಾಮ ಎಕ್ಸ್‍ಪ್ರೆಸ್ ರೈಲು ಇದ್ದಾಗಿದ್ದು, ಗುಡ್ಡದ ಮಣ್ಣು ಹೆಚ್ಚಾಗಿ ರೈಲಿನ ಇಂಜಿನ್ ಮೇಲೆಯೇ ಬಿದ್ದಿತ್ತು ಎನ್ನಲಾಗುತ್ತಿದ್ದು, ಇದರಿಂದ ಯಾವುದೇ ಹಾನಿ ಆಗಿಲ್ಲ ಎಂದು ತಿಳಿದು ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News