ಎಲ್ಲ ವರ್ಗದ ಜನರಿಗೂ ಕೃತಜ್ಞತೆ: ಬಸವರಾಜ ಬೊಮ್ಮಾಯಿ

Update: 2020-08-05 15:55 GMT

ಬೆಂಗಳೂರು, ಆ.5: ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಶಿಲಾನ್ಯಾಸ ಸಮಾರಂಭ ಹಿನ್ನೆಲೆ ಸಹಕಾರ ನೀಡಿದ ಎಲ್ಲ ವರ್ಗದ ಜನರಿಗೂ ಕೃತಜ್ಞತೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಬುಧವಾರ ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಇಂದು ಹಲವು ವರ್ಷಗಳ ಇತಿಹಾಸದ ಸತ್ಯವನ್ನು ಪುನಃ ನಿರ್ಮಿಸುವಂತಹ ಮಹತ್ವದ ಕಾರ್ಯ ಇದಾಗಿದೆ. ಅಲ್ಲದೆ ಸುದೀರ್ಘವಾದ ಹೋರಾಟದ ಮತ್ತು ಹಲವಾರು ಜನರ ತ್ಯಾಗದ ಪ್ರತಿಫಲಸಿಕ್ಕಂತಾಗಿದೆ. ಎಲ್ಲ ಪ್ರಾಣ ತ್ಯಾಗ ಮಾಡಿ ಹೋರಾಟಗಾರರಿಗೆ ನಮನಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ರಾಮ ಜನ್ಮ ಭೂಮಿ ಹೋರಾಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮೂಂಚೂಣಿಯಲ್ಲಿದಿದ್ದು ನಮಗೆ ಹೆಮ್ಮೆಯ ವಿಷಯ. ಸರ್ವೋಚ್ಚ ನ್ಯಾಯಾಲಯವು ಐತಿಹಾಸಿಕ ತೀರ್ಪುನ್ನು ನೀಡಿದ್ದು ಈ ವಿವಾದಕ್ಕೆ ತೆರೆ ಎಳೆದಿರುವುದು ಅತ್ಯಂತ ಶಾಘನೀಯ.
ಈ ತೀರ್ಪು ದೇಶದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಮಹತ್ವದ ಪಾತ್ರವಹಿಸಿದೆ ಎಂದು ಅವರು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಿಕೊಂಡು ಶ್ರೀರಾಮನ ಭವ್ಯ ಮಂದಿರದ ಶಿಲಾನ್ಯಾಸ ಹಾಗೂ ಭೂಮಿ ಪೂಜೆ ಸಂಭ್ರಮಾಚರಣೆಯನ್ನು ಆಚರಿಸಿದ ಎಲ್ಲ ಸಂಘಟನೆ ಪ್ರಮುಖರಿಗೆ ಹಾಗೂ ಸದಸ್ಯರುಗಳಿಗೆ ಧನ್ಯವಾದಗಳು. ಈ ಸಮಾರಂಭಕ್ಕೆ ಸಹಕಾರ ನೀಡಿದ ಎಲ್ಲ ವರ್ಗದ ಜನರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News