ಶಿವಮೊಗ್ಗ: 168 ಮಂದಿಗೆ ಬುಧವಾರ ಕೊರೋನ ಪಾಸಿಟಿವ್

Update: 2020-08-05 18:06 GMT

ಶಿವಮೊಗ್ಗ: ಜಿಲ್ಲೆಯಲ್ಲಿ ಬುಧವಾರ ಪತ್ತೆಯಾದ ಪ್ರಕಣಗಳು ಹಿಂದಿನ ಎಲ್ಲ ದಾಖಲೆಗಳನ್ನು ಹಿಂದಿಕ್ಕಿವೆ. ಇದೇ ಮೊದಲ ಸಲ 168 ಪಾಸಿಟಿವ್ ಬಂದಿದ್ದು, ಸೋಂಕಿತರ ಸಂಖ್ಯೆ 2,363ಕ್ಕೆ ಏರಿಕೆಯಾಗಿದೆ. ಜತೆಗೆ, ಕಾಯಿಲೆ ಇಬ್ಬರನ್ನು ಬಲಿ ಪಡೆದಿದ್ದು, ಒಟ್ಟು 48 ಮಂದಿಯನ್ನು ಸಾವಿಗೀಡಾಗಿದ್ದಾರೆ.

ಶಿವಮೊಗ್ಗದಲ್ಲಿ 67, ಭದ್ರಾವತಿ 47, ಶಿಕಾರಿಪುರ 27, ತೀರ್ಥಹಳ್ಳಿ 10, ಸಾಗರ 11, ಸೊರಬ 2, ಹೊಸನಗರ 2 ಹೊರ ಜಿಲ್ಲೆಯ 2 ಪ್ರಕರಣಗಳು ಕಂಡುಬAದಿವೆ.

ಬುಧವಾರ 1064 ಮಂದಿಯ ಗಂಟಲು ದ್ರವ ಪರೀಕ್ಷಿಸಿದ್ದು, ಒಟ್ಟು 30,827 ಜನರ ಮಾದರಿ ಪರೀಕ್ಷಿಸಲಾಗಿದೆ. ಅದರಲ್ಲಿ 800 ಸೇರಿ ಒಟ್ಟು 27,968 ನೆಗೆಟಿವ್ ಬಂದಿವೆ. ಕೋವಿಡ್ ವಾರ್ಡ್ ಮತ್ತು ಕೋವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ 120 ಜನರಿಗೆ ಬಿಡುಗಡೆ ಮಾಡಲಾಗಿದೆ.

ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ ಕೋವಿಡ್ ವಾರ್ಡ್ನಲ್ಲಿ 220, ಕೋವಿಡ್ ಕೇರ್ ಸೆಂಟರ್‌ನಲ್ಲಿ 483, ಖಾಸಗಿ ಆಸ್ಪತ್ರೆಯಲ್ಲಿ 64 ಮತ್ತು ಮನೆಯಲ್ಲಿ 105 ಜನ ಆರೈಕೆಯಲ್ಲಿದ್ದು, ಜಿಎಡಿ ಆಸ್ಪತ್ರೆಯಲ್ಲಿ 82 ಸೇರಿ ಒಟ್ಟು 164 ಸಕ್ರೀಯ ಕೊರೊನಾ ಪ್ರಕರಣಗಳಿವೆ. ಇದುವರೆಗೆ 321 ಕಂಟೈನ್‌ಮೆAಟ್ ಜೋನ್‌ಗಳನ್ನು ಡಿನೋಟಿಫೈ ಮಾಡಿದ್ದು, ಇನ್ನೂ 869 ಜೋನ್‌ಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News