ಮೇ ತಿಂಗಳಲ್ಲೇ ಚೀನಾ ಸೇನೆ ಭಾರತದ ಭೂಭಾಗ ಪ್ರವೇಶಿಸಿತ್ತು ಎಂದು ಅಧಿಕೃತವಾಗಿ ಒಪ್ಪಿಕೊಂಡ ರಕ್ಷಣಾ ಸಚಿವಾಲಯ

Update: 2020-08-06 07:34 GMT

ಹೊಸದಿಲ್ಲಿ:  ಮೇ ತಿಂಗಳಲ್ಲಿ ಚೀನಾದ ಸೈನಿಕರು ಪೂರ್ವ ಲಡಾಖ್‍ ನಲ್ಲಿ ಭಾರತದ ಭೂಭಾಗದೊಳಗೆ ನುಸುಳಿದ್ದರು ಎಂಬುದನ್ನು ರಕ್ಷಣಾ ಇಲಾಖೆ ಅಧಿಕೃತವಾಗಿ ಒಪ್ಪಿಕೊಂಡಿದೆ ಎಂದು timesofindia.com ವರದಿ ಮಾಡಿದೆ.

“ಚೀನಾದ ಕಡೆಯು ಕುಗ್ರಂಗ್ ನಾಲಾ (ಪೆಟ್ರೋಲಿಂಗ್ ಪಾಯಿಂಟ್-15, ಹಾಟ್ ಸ್ಪ್ರಿಂಗ್ಸ್ ನ ಉತ್ತರ ಭಾಗದಲ್ಲಿ), ಗೋಗ್ರಾ (ಪಿಪಿ-17ಎ) ಹಾಗೂ ಪ್ಯಾಂಗೊಂಗ್ ತ್ಸೊ ಇದರ ಉತ್ತರದ ಭಾಗದಲ್ಲಿ  ಮೇ 17-18ರಂದು  ಅತಿಕ್ರಮಿಸಿತ್ತು'' ಎಂದು ಮಂಗಳವಾರ ರಕ್ಷಣಾ ಸಚಿವಾಲಯದ ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಲಾಗಿರುವ ಹೊಸ ದಾಖಲೆಯಲ್ಲಿ ಹೇಳಲಾಗಿದೆ.

‘ಅತಿಕ್ರಮಣ' ಎಂಬ ಪದವನ್ನು ‘ನುಸುಳುವಿಕೆ' ಬದಲು ಸಚಿವಾಲಯ ಬಳಸಿದೆ. ಆದರೆ  ಈ ಪದವನ್ನು ಮೇ ಆರಂಭದಲ್ಲಿ  ಚೀನಾ ಜತೆ ಪ್ಯಾಂಗೊಂಗ್ ತ್ಸು ಇದರ ಉತ್ತರದ ದಿಕ್ಕಿನಲ್ಲಿ ನಡೆದ  ಮೊದಲ ಸಂಘರ್ಷದ ನಂತರ ಇತ್ತೀಚೆಗೆ ಸರಕಾರ ಬಳಸಿರುವುದು ಮೊದಲನೇ ಬಾರಿ.

ಮೇ ಅಂತ್ಯದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಟಿವಿ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಸಾಕಷ್ಟು ಸಂಖ್ಯೆಯಲ್ಲಿ ಚೀನಾದ ಸೈನಿಕರು, “ಈ ಹಿಂದೆ ಇದ್ದುದಕ್ಕಿಂತ ಸ್ವಲ್ಪ  ಮುಂದೆ ಬಂದಿದ್ದಾರೆ” ಎಂದಷ್ಟೇ ಹೇಳಿದ್ದರು. ಆದರೆ ವಾಸ್ತವಿಕ ಗಡಿ ನಿಯಂತ್ರಣ ರೇಖೆಯ ಭಾರತದ ಕಡೆಯ ಭೂಭಾಗವನ್ನು ಚೀನಾದ ಪಡೆಗಳು ಪ್ರವೇಶಿಸಿವೆ ಎಂದು ತಪ್ಪಾಗಿ ಅರ್ಥೈಸಬಾರದು ಎಂದು  ನಂತರ  ಅಧಿಕೃತವಾಗಿ ಸ್ಪಷ್ಟೀಕರಣ ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News