ಕೊಡಗು ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ 610ಕ್ಕೆ ಏರಿಕೆ

Update: 2020-08-06 13:51 GMT

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆಯ ಆರ್ಭಟದೊಂದಿಗೆ ಕೊರೋನ ಸೋಂಕಿನ ಪ್ರಕರಣಗಳು ಹೆಚ್ಚುತ್ತಿದ್ದು, ಗುರುವಾರದಂದು ಮಧ್ಯಾಹ್ನದ ವೇಳೆಗೆ ಹೊಸ 25 ಪ್ರಕರಣಗಳು ಪತ್ತೆಯಾಗುವುದರೊಂದಿಗೆ, ಸೋಂಕಿತರ ಸಂಖ್ಯೆ 610ಕ್ಕೆ ಏರಿದೆ.

ಸೋಂಕಿತರಲ್ಲಿ 369 ಮಂದಿ ಗುಣಮುಖರಾಗಿದ್ದು, 231 ಸಕ್ರಿಯ ಪ್ರಕರಣಗಳಿವೆ.  10 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 169 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ  9 ಹೊಸ ಕೊರೋನ ಪ್ರಕರಣಗಳು ದೃಢಪಟ್ಟಿದೆ. ಕುಶಾಲನಗರದ ನೇತಾಜಿ ಬಡವಾಣೆಯ 19 ವರ್ಷದ ಪುರುಷ, ಪಿರಿಯಾಪಟ್ಟಣದ ಆವರ್ತಿಯ 43 ವರ್ಷದ ಪುರುಷ,  ಶನಿವಾರಸಂತೆಯ ತ್ಯಾಗರಾಜ ಕಾಲೋನಿಯ 46 ವರ್ಷದ ಪುರುಷ,  ವಿರಾಜಪೇಟೆಯ ಮೊಗರಗಲ್ಲಿಯ 40 ವರ್ಷದ ಮಹಿಳೆ ಮತ್ತು 22 ವರ್ಷದ ಪುರುಷ,  ಕುಶಾಲನಗರದ ಮುಳ್ಳುಸೋಗೆಯ 34 ವರ್ಷದ ಪುರುಷ,  ವಿರಾಜಪೇಟೆಯ 37ಮತ್ತು 45 ವರ್ಷದ ಮಹಿಳೆ,  ಮಾದಾಪುರದ 48 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ. 

ಮಧ್ಯಾಹ್ನ 16 ಹೊಸ ಕೊರೋನ ಸೊಂಕಿನ ಪ್ರಕರಣಗಳು ಪತ್ತೆಯಾಗಿದೆ. ವಿರಾಜಪೇಟೆ ತಾಲ್ಲೂಕಿನ ಕುಟ್ಟದ ಪೂಜೆಕಲ್ಲುವಿನ 65 ವರ್ಷದ ಮಹಿಳೆ, ಸೋಮವಾರಪೇಟೆ ಚೌಡ್ಲುವಿನ 14 ವರ್ಷದ ಬಾಲಕ,  ವಿರಾಜಪೇಟೆಯ ಕುಟ್ಟಂದಿಯ 48 ವರ್ಷದ ಪುರುಷ,  ಸೋಮವಾರಪೇಟೆಯ ದೊಡ್ಡಹಣಕೋಡುವಿನ 55 ವರ್ಷದ ಪುರುಷ,  ಚೆಟ್ಟಳ್ಳಿ ಭೂತನಕಾಡುವಿನ 45 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದೆ.   

ಸೋಮವಾರಪೇಟೆ ತಾಲ್ಲೂಕಿನ ಒಂಟಿಯಂಗಡಿ ಅಭ್ಯತ್ ಮಂಗಲದ 25 ವರ್ಷದ ಮಹಿಳೆ,  ಕುಶಾಲನಗರದ ತೊರೆನೂರುವಿನ 44 ವರ್ಷದ ಮಹಿಳೆ,  ವಿರಾಜಪೇಟೆ ವಿಜಯನಗರದ 23 ವರ್ಷದ ಮಹಿಳೆ,  ವಿರಾಜಪೇಟೆ ತೆಲುಗರ ಬೀದಿಯ 52 ವರ್ಷದ ಪುರುಷ,  ಪೆರುಂಬಾಡಿಯ 55 ವರ್ಷದ ಪುರುಷ ಮತ್ತು 50 ವರ್ಷದ ಮಹಿಳೆ,  ತೊರೆನೂರುವಿನ 50 ವರ್ಷದ ಪುರುಷ,  ಗೋಣಿಕೊಪ್ಪಲುವಿನ ಅಚ್ಚಪ್ಪ ಲೇಔಟ್ ನ 37 ವರ್ಷದ ಪುರುಷ.  ಮಡಿಕೇರಿ ಗೌಳಿಬೀದಿಯ ಲೋಕಾಯುಕ್ತ ಕಟ್ಟಡದ 36 ವರ್ಷದ ಪುರುಷ, ಮಡಿಕೇರಿಯ ಪೊಲೀಸ್ ವಸತಿ ಗೃಹದ 47 ವರ್ಷದ ಪುರುಷ, ಮಡಿಕೇರಿಯ ಹೈವೇ ಹೊಟೇಲ್ ಹಿಂಭಾಗದ 25 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News